ಬಂಟ್ವಾಳ, ಜು 01 (Daijiworld News/MSP): ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಕನಸಿನ ಕಾರ್ಯಕ್ರಮ " ಗ್ರಾಮದ ಕಡೆ ಶಾಸಕರ ನಡೆ" ಗ್ರಾಮ ಸ್ಪಂದನ ಕಾರ್ಯಕ್ರಮ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವಿಟ್ಲ ಪಡ್ನೂರು ಗ್ರಾ.ಪಂ.ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಜನರ ಮತ್ತು ಸರಕಾರದ ಕೊಂಡಿಯಾಗಿ ನಾನು ನಿಮ್ಮ ಸೇವೆ ಮಾಡಲು ಅವಕಾಶ ನೀಡಿದ್ದೀರಿ.ಶಾಸಕನ ಜವಬ್ದಾರಿ ಯನ್ನು ಅರಿತುಕೊಂಡು ನಿಮ್ಮ ಸಮಸ್ಯೆ ಯನ್ನು ಅರಿತುಕೊಂಡು ವಿಧಾನ ಸೌಧದಲ್ಲಿ ಧ್ಬನಿಯೆತ್ತಲು ಈ ಗ್ರಾಮ ಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಬಹಳಷ್ಟು ಜನರು ಸಮಸ್ಯೆಯನ್ನು ಹೇಳಿಕೊಂಡು ಶಾಸಕರ ಕಚೇರಿಗೆ ಬರಲು ಅಸಾಧ್ಯ ವಾಗಬಹುದು, ಹಾಗಾಗಿ ನಾನೇ ನಿಮ್ಮ ಬಳಿ ಬಂದಿದ್ದೇನೆ. ನಿಮ್ಮ ಬೇಡಿಕೆ ಹಾಗೂ ಸಮಸ್ಯೆ ಗಳಿಗೆ ಸ್ಪಂದಿಸುವ ಭರವಸೆ ನೀಡುತ್ತೇನೆ ಎಂದು ಅವರು ಹೇಳಿದರು.
ಇಲ್ಲಿನ ಜನರ ಬೇಡಿಕೆ ಅನುಗುಣವಾಗಿ ಹಂತಹಂತವಾಗಿ ಎಲ್ಲಾ ಭರವಸೆಗಳನ್ನು ಅಧ್ಯತೆಯ ನೆಲೆಯಲ್ಲಿ ಈಡೇರಿಸಲು ಬದ್ದನಾಗಿದ್ದೇನೆ ಎಂದು ಅವರು ಹೇಳಿದರು.ವಿಟ್ಲ ಪಡ್ನೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಒಟ್ಟು 1 ಕೋಟಿ 6 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು ಕೆಲವು ಕಾಮಗಾರಿಗಳು ಮುಕ್ತಾಯವಾಗಿದೆ ಇನ್ನು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ಆರಂಭದಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಶಾಲೆಗಳ ಕಟ್ಟಡ ನಿರ್ಮಾಣ, ತಡೆಗೋಡೆ, ಕಿಂಡಿ ಅಣೆಕಟ್ಟು, ರಸ್ತೆ ಕಾಮಗಾರಿ ವೀಕ್ಷಣೆ ನಡೆಸಿದರು ಬಳಿಕ ರಸ್ತೆಗಳ ಉದ್ಘಾಟನೆ ಮಾಡಿದರು.ಸಾರ್ವಜನಿಕರ ಅಹವಾಲು ಸ್ವೀಕಾರದ ಮೊದಲು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರು.ಸಾರ್ವಜನಿಕ ರಿಂದ ಕೆಲವು ಸಮಸ್ಯೆ ಗಳಿಗೆ ಕಾರಣಗಳು ಏನು ಮತ್ತು ಅದರ ಬಗ್ಗೆ ಗಮನ ಹರಿಸಿ ಎಂದು ಅವರು ಹೇಳಿದರು.ಬಹುಗ್ರಾಮ ಕುಡಿಯುವ ನೀರಿನ ಸಮಸ್ಯೆ ಯ ಬಗ್ಗೆ ಸಾರ್ವಜನಿಕ ರಿಂದ ಹಾಗೂ ಪಂಚಾಯತ್ ಸದಸ್ಯ ರ ದೂರುಗಳಿವೆ ಈ ಬಗ್ಗೆ ಸಮಗ್ರವಾದ ಮಾಹಿತಿ ಬೇಕು ಹಾಗೂ ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ವಿದ್ಯುತ್ ಇಲಾಖೆಯವರು ಗ್ರಾಮ ಸಭೆಯಾಗಲಿ ಅಥವಾ ದೂರುಗಳಿದ್ದರೆ ಇವರು ಸ್ಥಳಕ್ಕೆ ಬರುವುದೇ ಇಲ್ಲ , ಜೊತೆಗೆ ಕೆಲವು ಸಮಸ್ಯೆಗಳ ಬಗ್ಗೆ ಸದಸ್ಯೆ ದೂರು ನೀಡಿದರು.
ಅಹವಾಲು ಸ್ಬೀಕರಿಸಿದ ಸಂದರ್ಭದಲ್ಲಿ ಬಂದು ದೂರು ನೀಡಿದ ನಾರಾಯಣ ಭಟ್ ಅವರು ಕಳೆದ ನಾಲ್ಕು ವರ್ಷಗಳಿಂದ ಹಳೆಯ ತಂತಿ ಬದಲಾವಣೆ ಮಾಡದೆ ಸಾಕಷ್ಟು ಸಮಸ್ಯೆ ಗಳಾಗುತ್ತಿದೆ , ಅವಘಡಗಳು ಸಂಭವಿಸುವ ಮೊದಲು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದರು ಅವರು ಹೇಳಿದರು. ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು ಸ್ಥಳದಲ್ಲಿಯೇ ಮೇಲಾಧಿಕಾರಿಗಳಿಗೆ ಪೋನ್ ಮೂಲಕ ಸಂಪರ್ಕ ಮಾಡಿ ನಿಗದಿತ ಅವದಿಯಲ್ಲಿ ಸಮಸ್ಯೆ ಬಗೆಹರಿಸಲು ತಿಳಿಸಿದರು.
ಬೆದ್ರಕಾಡು ನೂತನ ಅಂಗನವಾಡಿ ನಿರ್ಮಾಣ ದ ಬಗ್ಗೆ ದೂರಿಗೆ ಸ್ಪಂದಿಸಿದ ಶಾಸಕರು ಈಗಾಗಲೇ ಈ ಅಂಗನವಾಡಿಗೆ ಅನುದಾನ ಬಿಡುಗಡೆಯಾಗಿದೆ ಎಸಿಯವರು ಜಾಗ ಗುರುತಿಸಿದ ಕೂಡಲೇ ಕೆಲಸ ಪ್ರಾರಂಭವಾಗುತ್ತದೆ, ಅಧಿಕಾರಿಗೆ ಜಾಗ ಗುರುತಿಗೆ ತಿಳಿಸಿದ್ದೇನೆ ಎಂದು ಅವರು ತಿಳಿಸಿದರು. ಕೆಲವೊಂದು ಕಡೆಗೆ ರಸ್ತೆ ನಿರ್ಮಾಣ ಹಾಗೂ ನೀರಿನ ಸಮಸ್ಯೆ ಗಳ ಬಗ್ಗೆ ಬಂದ ದೂರಿಗೆ ಶಾಸಕರು ಅಧಿಕಾರಿಗಳಿಗೆ ಕ್ಪಪ್ತ ಸಮಯದಲ್ಲಿ ಸಮಸ್ಯೆ ಪರಿಹಾರದ ಕ್ರಮಕೈಗೊಳ್ಳಲು ಸೂಚಿಸಿದರು.
ವೇದಿಕೆಯಲ್ಲಿ ಗ್ರಾ.ಪಂ.ಅದ್ಯಕ್ಷ ರವೀಶ್ ಶೆಟ್ಟಿ ಕರ್ಕಳ , ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಗ್ರಾ.ಪಂ.ಉಪಾಧ್ಯಕ್ಷೆ ಸುಧಾ ಎಸ್. ಶೆಟ್ಟಿ, ಸದಸ್ಯ ರಾದ ಜಯಂತಿ ಪಿ.ಪ್ರೇಮಲತಾ , ಸಿದ್ದೀಕ್, ಅಬ್ದುಲ .ಕೆ, ಭಾಸ್ಕರ ಶೆಟ್ಟಿ ಗಾರ್, ನಾಗೇಶ್ ಶೆಟ್ಟಿ, ದಾಕ್ಷಾಯಿಣಿ, ಭಾರತಿ, ಇಲಾಖಾ ಅಧಿಕಾರಿಗಳಾದ ಪಂಚಾಯತ್ ರಾಜ್ ಇಂಜಿನಿಯರ್ ನಾಗೇಶ್ , ಸಣ್ಣ ನೀರಾವರಿ ವಿಭಾಗದ ಇಂಜಿನಿಯರ್ ಪ್ರಸನ್ನ, ಕಂದಾಯ ಇಲಾಖಾ ಅಧಿಕಾರಿ ದಿವಾಕರ, ಮೆಸ್ಕಾಂ ಜೆ.ಇ. ಜೋಶಿ , ಗ್ರಾಮ ಕರಣೀಕ ಕರಿ ಬಸಪ್ಪ, ಪಿ.ಡಿ.ಒ.ಸುಜಯ ಕೆ, , ಬಿಜೆಪಿ ಪ್ರಮುಖರಾದ ದೇವದಾಸ ಶೆಟ್ಟಿ, , ದಿನೇಶ್ ಅಮ್ಟೂರು , ಅಭಿಷೇಕ್ ರೈ, ಸತೀಶ್ ಭಟ್ ಪಂಜಿಗದ್ದೆ , ಧರ್ಮಾವತಿ, ರಚಿತ್ ಕುಮಾರ್ ಶೆಟ್ಟಿ,ಪುರುಷೋತ್ತಮ ವಾಮದಪದವು, ಗಣೇಶ್ ರೈ ಮಾಣಿ, ರಮಾನಾಥ ರಾಯಿ, ಸುದರ್ಶನ ಬಜ, ಬಾಲಕೃಷ್ಣ ಸೆರ್ಕಳ ಮತ್ತಿತರ ರು ಉಪಸ್ಥಿತರಿದ್ದರು. ಗ್ರಾ.ಪಂ.ಅಧ್ಯಕ್ಷ ರವೀಶ್ ಶೆಟ್ಟಿ ಸ್ವಾಗತಿಸಿ, ಜಯಂತ್ ಪೂರ್ಲಿಪಾಡಿ ವಂದಿಸಿದರು.