ಮಂಗಳೂರು, ಜೂ 30 (Daijiworld News/SM): ದುಬೈನಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ನಿಯಂತ್ರಣ ಸಿಗದ ಹಿನ್ನೆಲೆ ರನ್ ವೇಯಿಂದ ಮುಂದಕ್ಕೆ ಚಲಿಸಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ಘಟನೆ ನಡೆದ ಸಂದರ್ಭ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದರು. ಹಾಗೂ ಅವರನ್ನು ತಕ್ಷಣವೇ ಇಳಿಸಲಾಯಿತು. ಸದ್ಯದ ತಿಳಿದು ಬಂದಿರುವ ಮಾಹಿತಿ ಪ್ರಕಾರ ವಿಮಾನಕ್ಕೆ ಯಾವುದೇ ಹಾನಿಯಾಗಿಲ್ಲ. ಅಲ್ಲದೆ ವಿಮಾನದ ಎಂಜಿನ್ ಕೂಡ ಯಾವುದೇ ದೋಷವುಂಟಾಗಿಲ್ಲ. ಮುಂದೆ ಈ ಬಗ್ಗೆ ಸಂಪೂರ್ಣ ಪರೀಕ್ಷಿಸಿ ಮಾಹಿತಿ ತಿಳಿಯಲಿದೆ. ಸದ್ಯ ವಿಮಾನವನ್ನು ತೆರವುಗೊಳಿಸಿ ಸುರಕ್ಷಿತ ಸ್ಥಳಕ್ಕೆ ತರಲಾಗಿದೆ ಎಂದು ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ದುಬೈನಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಸ್ಕಿಡ್ ಆಗಿರುವ ಘಟನೆ ಜೂನ್ 30ರ ರವಿವಾರ ಸಂಜೆ 5.40ಕ್ಕೆ ನಡೆದಿತ್ತು. ದುಬೈನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವಿಮಾನ ನಿಯಂತ್ರಣ ಕಳೆದುಕೊಂಡು ಟರ್ಮಿನಲ್ ನಲ್ಲಿ ಟ್ಯಾಕ್ಸಿ ವೇನಿಂದ ಮುನ್ನುಗ್ಗಿತ್ತು. ಘಟನೆಯಲ್ಲಿ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದರು. ಬಳಿಕ ವಿಮಾನವನ್ನು ಸುರಕ್ಷಿತ ಸ್ಥಳಕ್ಕೆ ತರಲಾಯಿತು.