ಮಂಗಳೂರು, ಜೂ30(Daijiworld News/SS): ಒಬ್ಬ ಪುರುಷ ಮತ್ತು ಮಹಿಳೆ ಆತ್ಮೀಯ ಕೃತ್ಯದಲ್ಲಿ ತೊಡಗಿರುವ ವಿಡಿಯೋಗಳನ್ನು ವಾಟ್ಸಾಪ್ ಮೂಲಕ ಪ್ರಸಾರ ಮಾಡಲಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ, ವಿಡಿಯೋ ಪ್ರಸಾರ ಮಾಡುವ ಕಿಡಿಗೇಡಿಗಳ ವಿರುದ್ಧ ಸು-ಮೋಟು ಪ್ರಕರಣವನ್ನು ಕೈಗೆತ್ತಿಕೊಳ್ಳುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ನೂತನ ಎಸ್ ಪಿ, ಬಿ.ಎಂ.ಲಕ್ಷ್ಮಿ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.
ಉಲ್ಲೇಖಿತ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಬಾರದು ಅಥವಾ ಉಲ್ಲೇಖಿತ ವೀಡಿಯೊಗಳನ್ನು ಅವರ ಫೋನ್ / ಕಂಪ್ಯೂಟರ್ಗಳಲ್ಲಿ ಉಳಿಸಬಾರದು ಎಂದು ನಾವು ಸಾರ್ವಜನಿಕರ ಬಳಿ ವಿನಂತಿ ಮಾಡುತ್ತೇವೆ. ಈ ರೀತಿಯ ಕೆಲಸ ಮಾಡುವುದು ಐಪಿಸಿ ಸೆಕ್ಷನ್ 354 ಸಿ ಮತ್ತು 66 ಇ, ಐಟಿ ಕಾಯ್ದೆಯ 66 ಎ ಅಡಿಯಲ್ಲಿ ಅಪರಾಧವಾಗಿದೆ. ಒಂದು ವೇಳೆ ವಿಡಿಯೋ ಪ್ರಸಾರ ಮಾಡಿದರೆ, ಅವರನ್ನು ಆರೋಪಿಯನ್ನಾಗಿ ಮಾಡಿ ಪ್ರಕರಣ ದಾಖಲಿಸಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.