ಬೆಳ್ತಂಗಡಿ, ಜೂ 28 (Daijiworld News/MSP): ಮತ್ತೊಮ್ಮೆ ಅಪ್ಪನಾದ ಖುಷಿಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ತಡರಾತ್ರಿ ಆಸ್ಪತ್ರೆಗೆ ಪತ್ನಿ, ಮಗುವಿಗಾಗಿ ಧಾವಿಸಿದ್ರೆ ಅತ್ತ ಕಡೆ ಕಾರ್ಯಕರಿಂದ ಕರೆಯೊಂದು ಬಂದಿತ್ತು. ಸಂಭ್ರಮದ ನಡೆಯೂ ಕಾರ್ಯಕರ್ತರ ನೋವಿಗೆ ಸ್ಪಂದಿಸಿ ಧಾವಿಸಿ ಬಂದ ಹರೀಶ್ ಕುಮಾರ್ ಅವರ ಇದೀಗ ಅವರ ಅಭಿಮಾನಿಗಳು ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿಯ ಬಂದಾರು ಸನಿಹ ಅಕ್ರಮವಾಗಿ ಗೋಸಾಗಟ ಮಾಡುವವರು ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಮೂರು ಜಾನುವಾರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದಾಗ ಖಚಿತ ಮಾಹಿತಿ ಪಡೆದ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ವಾಹನ ತಡೆದು ಗೋಕಳ್ಳರನ್ನು ಹಿಡಿದು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು. ಆದರೆ ಜಾನುವಾರು ಕಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿದ್ದರು. ಈ ಘಟನೆಯ ಮಾಹಿತಿ ದೊರೆತ ತಕ್ಷಣ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾ, ತಮ್ಮ ಖುಷಿಯಲ್ಲೂ ಕಾರ್ಯಕರ್ತನ ನೋವಿಗೆ ಸ್ಪಂದಿಸಿ, ತಡರಾತ್ರಿ ತಮ್ಮ ಪತ್ನಿ ಮಗುವಿಗೆ ಜನ್ಮ ನೀಡಿದ ಸಂಧರ್ಭದಲ್ಲಿಯೂ ಉಪ್ಪಿನಂಗಡಿ ಠಾಣೆಗೆ ದೌಡಾಯಿಸಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದರು
ಅಕ್ರಮ ಗೋಸಾಗಾಟವನ್ನು ಪತ್ತೆ ಹಚ್ಚಿದ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸಿರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದ ಅವರು, ಠಾಣೆಯ ಎದುರಲ್ಲೇ ಪ್ರತಿಭಟನೆ ನಡೆಸಿದ್ದರು. ಮಾತ್ರವಲ್ಲದೆ ಕಾನೂನಿನ ಮೂಲಕ ಪೊಲೀಸರಿಗೆ ಸಂಘಟನೆಯವರು ಜಾನುವಾರು ಚೋರರನ್ನು ಹಿಡಿದು ಒಪ್ಪಿಸಿದರೆ, ಪೊಲೀಸರು ಹಿಡಿದುಕೊಟ್ಟವರ ಮೇಲೆ ಕೇಸ್ ಹಾಕುತ್ತಿದ್ದಾರೆ ಇದು ಸರಿಯಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ನಾವು ಅವರದೇ ಮಾರ್ಗದಲ್ಲಿ ಕೆಲಸಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.