ಬಂಟ್ವಾಳ, ಜೂ 27 (Daijiworld News/MSP): ಯುವತಿಯೊಂದಿಗೆ ನಗ್ನವಾಗಿರುವ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವ ಪೊಲೀಸರ ವಶವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ.
ಯುವತಿಯನ್ನು ಬೆತ್ತಲೆಗೊಳಿಸಿ ಆಕೆಯೊಂದಿಗೆ ಅಶ್ಲೀಲ ಫೋಟೊ ತೆಗೆದು ಬಳಿಕ ಹರಿಬಿಟ್ಟಿದ್ದ ಆರೋಪಿಯನ್ನು ಬಂಟ್ವಾಳದ ಲೊರೆಟ್ಟು ಟಿಪ್ಪು ನಗರ ನಿವಾಸಿ ಮೋನು ಯಾನೆ ಅಬ್ದುಲ್ ರಹಿಮಾನ್ (55) ಎಂದು ಗುರುತಿಸಲಾಗಿದೆ. ಈತ ಮೀನು ವ್ಯಾಪಾರಿಯಾಗಿದ್ದು ಎರಡು ಮದುವೆಯಾಗಿ 9 ಮಂದಿ ಮಕ್ಕಳ ತಂದೆಯಾಗಿದ್ದಾನೆ.
ಈತ ಯುವತಿಯೊಂದಿಗೆ ನಗ್ನವಾಗಿ ಪ್ರೇಮಸಲ್ಲಾಪವಾಡುವ ವೀಡಿಯೋ ಚಿತ್ರೀಕರಣ ನಡೆಸಿ ಅ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ಈತನ ವಿರುದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಸ್ಥಳೀಯ ಸಂಘಟನೆಯೊಂದು ದೂರು ನೀಡಿತ್ತು.
ದೂರಿನಂತೆ ಬಂಟ್ವಾಳ ನಗರ ಠಾಣಾ ಎಸ್. ಐ.ಚಂದ್ರಶೇಖರ್ ಅವರು ಆರೋಪಿಯನ್ನು ದೂರು ನೀಡಿದ ಕೆಲವೇ ಕ್ಷಣದಲ್ಲಿ ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ಕೈಗೊಂಡಿದ್ದಾರೆ.