ಪುಂಜಾಲಕಟ್ಟೆ, ಜೂ 27 (Daijiworld News/MSP): ಅಪ್ರಾಪ್ತ ವಯಸ್ಸಿನ ಪುತ್ರಿ ಮೇಲೆ ಸ್ವತಃ ತಂದೆಯೇ ಅತ್ಯಾಚಾರ ನಡೆಸಿದ ಪರಿಣಾಮ ಬಾಲಕಿ ಗರ್ಭವತಿಯಾದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ 15 ವರ್ಷದ ಬಾಲಕಿ ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪೋಸ್ಕೋ ಪ್ರಕರಣ ದಾಖಲಾಗಿದ್ದು, ಬಾಲಕಿ ತಂದೆ ಇಸ್ಮಾಯಿಲ್ ಎಂಬಾತನನ್ನು ಪೊಲೀಸರು ಜೂ.26 ರ ಬುಧವಾರ ರಾತ್ರಿ ಬಂಧಿಸಿದ್ದಾರೆ.
ಬಾಲಕಿ ತಂದೆ ತಾಯಿ ತಮ್ಮ ಹಾಗೂ ತಂಗಿಯೊಂದಿಗೆ ಪಿಲಾತಬೆಟ್ಟು ಮನೆಯಲ್ಲಿ ವಾಸವಾಗಿದ್ದು, ತಮ್ಮ ಹಾಗೂ ತಂಗಿಯಂದಿರು ತಂದೆ ತಾಯಿಯ ಜೊತೆಯಲ್ಲಿ ಹಾಗೂ ಸಂತ್ರಸ್ತ ಬಾಲಕಿ ಪ್ರತ್ಯೇಕ ಕೋಣೆಯಲ್ಲಿ ಮಲಗುತ್ತಿದ್ದರು.
ಆದರೆ ಫೆ. 8ನೇ ತಾರೀಖಿನಂದು ಮಧ್ಯ ರಾತ್ರಿಯ ವೇಳೆ ಮನೆಯಲ್ಲಿ ಎಲ್ಲರೂ ನಿದ್ದೆಗೆ ಜಾರಿದ್ದ ಸಮಯದಲ್ಲಿ, ಮಗಳ ಮೇಲೆ ಏರಗಿದ ತಂದೆ ಅತ್ಯಾಚಾರಗೈದಿದ್ದ. ಮಲಗಿದ್ದಾಗ ಬಾಲಕಿ ಹೆದರಿ ಬೊಬ್ಬೆ ಹಾಕಿದಾಗ ಬೊಬ್ಬೆ ಹಾಕದಂತೆ ಬಾಯಿಯನ್ನು ಒತ್ತಿ ಹಿಡಿದು ಮೇಲೆ ಬಲತ್ಕಾರವಾಗಿ ದೈಹಿಕ ಸಂಪರ್ಕವನ್ನು ಮಾಡಿದ್ದಲ್ಲದೆ ಆ ಬಳಿಕವೂ ಮಗಳನ್ನು ಬೆದರಿಸಿ ಆಕೆಯ ಮೇಲೆ ಬಲವಂತದ ದೈಹಿಕ ಸಂಪರ್ಕ ನಡೆಸಿದ್ದ. ಈ ಹಿನ್ನಲೆಯಲ್ಲಿ ಬಾಲಕಿ ಗರ್ಭಧರಿಸಿದ್ದಳು ಎಂದು ದೂರಿನಲ್ಲಿ ವಿವರಿಸಲಾಗಿದೆ.