ಶಿವಮೊಗ್ಗ ಡಿ 08: ನಟಿ ಕಾವ್ಯ ಆಚಾರ್ಯ ತಾಯಿ ಮತ್ತು ಸಹೋದರನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇವರು ದಯಾನಂದ ಸ್ವಾಮೀಜಿ ಜೊತೆ ರಾಸಲೀಲೆಯಲ್ಲಿ ಭಾಗಿಯಾಗಿ ಭಾರೀ ಸುದ್ದಿಯಾಗಿದ್ದರು. ಇವರೆಲ್ಲರೂ ಡಿ 8 ರ ಗುರುವಾರ ರಾತ್ರಿ ಮಂಗಳೂರಿನಿಂದ ತೀರ್ಥಹಳ್ಳಿಗೆ ಕಾರಿನಲ್ಲಿ ಹಿಂದಿರುಗುತ್ತಿದ್ದರು. ಆ ವೇಳೆಗೆ ತೀರ್ಥಹಳ್ಳಿಯ ಶಿವರಾಜಪುರ ಬಳಿ ಹೆದ್ದಾರಿಯಲ್ಲಿ ಕಾವ್ಯಾ ಅವರ ತಾಯಿ ನಾಗರತ್ನ ಮತ್ತು ಸಹೋದರ ಕೃಷ್ಣಾ ಅವರು ತೆರಳುತ್ತಿದ್ದ ಕಾರನ್ನು ಮಾರುತಿ ಆಮ್ನಿಯಲ್ಲಿ ಬಂದ ಐವರು ದುಷ್ಕರ್ಮಿಗಳು ಅಡ್ಡಗಟ್ಟಿ ಕಾವ್ಯಾ ಆಚಾರ್ಯ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಕೇಸು, ಕಂಪ್ಲೇಂಟ್ ಕೋರ್ಟ್ ಎಂದು ಹೋದರೆ ಕುಟುಂಬವೇ ನಾಶ ಮಾಡುತ್ತೇವೆ ಎಂದಿದ್ದಾರೆ. ಅಲ್ಲದೇ ನಟಿಯ ಅಣ್ಣನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ಕೃಷ್ಣ ಅವರ ತಾಯಿ ಕೂಗಿಕೊಂಡಿದ್ದರಿಂದ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ. ನಟಿ ಅಣ್ಣ ಕೃಷ್ಣ ಆಸ್ಪತ್ರೆಗೆ ದಾಖಲಾಗಿದ್ದು, ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಯಲಹಂಕ ಸಮೀಪದ ಮದ್ದೇವಣಾಪುರ ಮಹಾದೇವ ಸಂಸ್ಥಾನ ಮಠದ ಉತ್ತರಾಧಿಕಾರಿ ಎಂದು ಬಿಂಬಿತವಾಗಿದ್ದ ಗುರುನಂಜೇಶ್ವರ ಸ್ವಾಮೀಜಿ ನಟಿ ಕಾವ್ಯಾ ಅವರೊಂದಿಗೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಬಹಿರಂಗವಾಗಿ ರಾಜ್ಯದಲ್ಲಿ ಬಾರೀ ಸಂಚಲವನ್ನುಂಟು ಮಾಡಿತ್ತು.