ಮಂಗಳೂರು ಡಿ 8: ಒಖಿ ಪ್ರತಾಪಕ್ಕೆ ಕರಾವಳಿ ಮೀನು ಖಾದ್ಯ ಪ್ರೀಯರು ಮಾತ್ರ ಕಂಗೆಟ್ಟಿದ್ದಾರೆ.. ಕಾರಣ ಕರಾವಳಿಯಲ್ಲೇ ಮೀನು ಸಾಕಷ್ಟು ಪ್ರಮಾಣದಲ್ಲಿ ದೊರೆಯದೆ ಸೀ ಪುಡ್ ಪ್ರಿಯರು ಪರಿತಪಿಸುವಂತಾಗಿದ್ದಾರೆ . ಓಖಿ ಚಂಡಮಾರುತದ ಅಲೆಗಳಿಗೆ ಕಂಗೆಟ್ಟಿದ್ದ ಮೀನುಗಾರರು ವಾರಗಳು ಕಳೆದರು ಮೀನುಗಾರಿಕೆ ಉತ್ಸಾಹ ತೋರುತ್ತಿಲ್ಲ. ಜತೆಗೆ ಕರಾವಳಿಯಲ್ಲಿ ಕಳೆದೊಂದು ವಾರ ದಿಂದ ಮೀನುಗಾರಿಕೆಗೆ ದೋಣಿಗಳು ತೆರಳದ್ದರಿಂದ ಮೀನು ಬೆಲೆ ಏಕಾಏಕಿ ಏರಿಕೆಯಾಗಿದ್ದು, ಇದರ ಪರಿಣಾಮ ಕೋಳಿ ಮಾಂಸದ ಬೆಲೆಯ ಮೇಲೂ ಆಗಿದೆ. ಮೀನುಗಳ ಬೆಲೆಯಲ್ಲಿ ಕೆ.ಜಿ.ಗೆ 200 ರೂ.ನಿಂದ 400 ರೂ.ಗಳ ತನಕ ಬೆಲೆ ಏರಿಕೆಯಾಗಿ, ಜನಸಾಮಾನ್ಯರಿಗೆ ಮೀನು ಕೈಗೆಟಕದಂತಾಗಿದೆ. ಕೇಜಿ ಲೆಕ್ಕದಲ್ಲಿ ಮಾರಾಟ ಆಗುತ್ತಿದ್ದ ಮೀನು ಈಗ ಪೀಸ್ ಗಳ ಲೆಕ್ಕದಲ್ಲಿ ಮಾರಾಟವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮವನ್ನೇ ನಂಬಿಕೊಂಡ ಸಣ್ಣ ಪುಟ್ಟ ಮೀನು ಮಾರಾಟಗಾರರು ದುಬಾರಿ ಬೆಲೆ ಕೊಟ್ಟು ಮೀನು ಖರೀದಿಸಿ ಮಾರಾಟ ಮಾಡುವ ಶಕ್ತಿ ಇಲ್ಲದಾಗಿದೆ. ಇನ್ನು ಸ್ಟೇಟ್ ಬ್ಯಾಂಕ್ ಮೀನಿನ ಮಾರುಕಟ್ಟೆಯಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಮಹಿಳೆಯರು ಮೀನು ಮಾರಾಟದ ಕಾರ್ಯದಲ್ಲಿ ತೊಡಗಿಕೊಂಡಿದ್ದರೆ ಈಗ ಅವರ ಸಂಖ್ಯೆ ಅರ್ಧದಷ್ಟು ಇಲ್ಲ.ಇನ್ನು ಕ್ರಿಸ್ಮಸ್ ಹತ್ತಿರ ಬಂದು ಕೇಕ್ ಗೆ ಮೊಟ್ಟೆಗಳ ದರವು ವಿಪರೀತ ಏರಿದೆ. ಒಟ್ಟಿನಲ್ಲಿ ಮಾಂಸಹಾರಿ ಪ್ರಿಯರ ಜೇಬಿಗೆ ಕತ್ತರಿ ಗ್ಯಾರಂಟಿ.