ಪಡುಬಿದ್ರಿ ಡಿ 07: ಪಡುಬಿದ್ರಿ ಸುಜ್ಲಾನ್ ಕಂಪನಿ ಇಂದಿನಿಂದ ಅಧಿಕೃತವಾಗಿ ಪುನರಾರಂಭವಾಗಲಿದೆ. ನಿನ್ನೆ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಜೊತೆ ಕಂಪನಿ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಕಾರ್ಮಿಕರ ಪರವಾಗಿ ನಿರ್ಣಯ ತೆಗೆದುಕೊಂಡು ಕಂಪನಿ ಪುನರಾರಂಭಗೊಳ್ಳುವ ಅಧಿಕೃತ ಘೋಷಣೆ ಮಾಡಿದರು. ಎಲ್ಲಾ 330 ಕಾರ್ಮಿಕರನ್ನು ಕೆಲಸಕ್ಕೆ ಮರು ಸೇರ್ಪಡೆ ಗೊಳಿಸುವ ಅಂತಿಮ ಒಪ್ಪಂದಕ್ಕೆ 280 ಕಾರ್ಮಿಕರು ಸಹಿ ಮಾಡಿದ ಒಪ್ಪಂದ ಪತ್ರವನ್ನು ರಾಕೇಶ್ ಮಲ್ಲಿ ವಿಜಯ್ ಅಸ್ನಾನಿಯವರಿಗೆ ಹಸ್ತಾಂತರಿಸಿದರು. ಸಭೆ ಮುಗಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಇಂಟಕ್ ಅದ್ಯಕ್ಷ ರಾಕೆಶ್ ಮಲ್ಲಿ, ಲಾಕೌಟ್ ಸಮಸ್ಯೆ ಬಗೆಹರಿದಿದೆ. ಕಂಪನಿ ಈಗಾಗಲೇ ಲಾಕ್ ಔಟ್ ಹಿಂತೆಗೆದು ಶುಕ್ರವಾರದಿಂದ ಕೆಲಸ ಆರಂಭವಾಗಲಿದೆ ಇನ್ನು ಒಂದು ವಾರದೊಳಗೆ ಎಲ್ಲಾ ಕಾರ್ಮಿಕರು ಕೆಲಸಕ್ಕೆ ಹಾಜರಿರುವಂತೆ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಇದು ಕಾರ್ಮಿಕ ಸಂಘಟನೆಗೆ ಸಿಕ್ಕ ಜಯವಾಗಿದೆ ಎಂದರು.