ಮಂಗಳೂರು,ಜೂ25(DaijiworldNews/AZM): ರಾಜ್ಯದಲ್ಲಿ ಅಲ್ಪಸಂಖ್ಯಾತ ರಿಗೆ ರಕ್ಷಣೆ ಇಲ್ಲ. ಐಎಮ್ ಎ ಹಗರಣದಲ್ಲಿ 90% ಮುಸ್ಲಿಂರಿಗೆ ಅನ್ಯಾಯವಾಗಿದೆ. ಹತ್ತು ಸಾವಿರ ಕೋಟಿ ಯ ಪಂಗನಾಮ ವಾಗಿದ್ದು, ಮನ್ಸೂರ್ ಖಾನ್ ಗೆ ಬಿರಿಯಾನಿ ತಿನ್ನಿಸಿದವರು ಕಾಂಗ್ರೆಸ್ಸಿಗರು ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ದೂರಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲ್ಲಿ ಈ ಕುರಿತು ಮಾತನಾಡಿದ ಅವರು ಸಿಟ್(ಎಸ್ ಐಟಿ) ಯಿಂದ ಪಾರದರ್ಶಕತೆ ತನಿಖೆಯಾಗುವ ನಂಬಿಕೆಯಿಲ್ಲ ಐ ಎಮ್ ಎ ಹಗರಣವನ್ನು CBI ಗೆ ಕೊಡಲಿ .ನಿಷ್ಪಕ್ಷಪಾತವಾದ ತನಿಖೆ ನಡೆಯಲಿ ಎಂದು ಅವರು ಆಗ್ರಹಿಸಿದರು.
ಇನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯದ ಕುರಿತು ಪ್ರತಿಕ್ರಯಿಸಿದ ಅವರು, ಗ್ರಾಮವಾಸ್ತವ್ಯದಲ್ಲಿ ಒಂದು ಕೋಟಿ 24 ಲಕ್ಷ ಖರ್ಚಾಗಿದ್ದೇ ಬಿಟ್ಟರೆ ಮುಖ್ಯಮಂತ್ರಿಗಳ ಸಾಧನೆ ಶೂನ್ಯ ಎಂದು ತಿಳಿಸಿದರು.ಸರ್ಕಾರಕ್ಕೆ ಮತ್ತು ಜನಸಾಮಾನ್ಯರಿಗೆ ಸಂಬಂಧವೇ ಇಲ್ಲ.ಕುಮಾರಸ್ವಾಮಿ ಮೊದಲು ಜನರ ಸಮಸ್ಯೆಗಳನ್ನು ಆಲಿಸಲಿ. ಜನರ ಸಮಸ್ಯೆ ಅರಿತು ಮತ್ತೆ ಗ್ರಾಮ ವಾಸ್ತವ್ಯ ಮಾಡಲಿ ಎಂದು ತಿಳಿಸಿದರು.
ದ.ಕ ಜಿಲ್ಲೆಯ ಗೋ ಸಾಗಾಟ ದಿಂದಾದ ಹಲ್ಲೆ ವಿಚಾರ ಸಂಬಂಧ ಮಾತನಾಡಿದ ಶ್ರೀನಿವಾಸ್ ಪೂಜಾರಿ, ಯಡಿಯೂರಪ್ಪ ಸರ್ಕಾರ ಇದ್ದಾಗ ಗೋ ಹತ್ಯೆ ನಿಷೇಧಕ್ಕೆ ಕಾಂಗ್ರೆಸ್ ತಡೆ ಮಾಡಿದೆರಾಷ್ಟ್ರಪತಿಗಳ ತಿದ್ದುಪಡಿ ಯನ್ನು ಕಾಂಗ್ರೆಸ್ ವಾಪಸ್ ಪಡೆದಿತ್ತು. ರಾಜ್ಯದಲ್ಲಿ ಸರ್ಕಾರ ಗೋ ಹತ್ಯೆನಿಷೇಧ ಮಾಡಲಿ. ಬಿಜೆಪಿ ತಂದಿದ್ದ ತಿದ್ದುಪಡಿ ಯನ್ನು ಅನುಮೋದಿಸಲಿ ಎಂದು ಹೇಳಿದರು.