ಮಂಗಳೂರು, ಸೆ 12: ಸಾಮಾಜಿಕ ಜಾಲ ತಾಣದಲ್ಲಿ ಕ್ರೈಸ್ತ ಧರ್ಮವನ್ನು ನಿಂದಿಸಿದ ಆರೋಪಿಯನ್ನು ತಕ್ಷಣ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ವತಿಯಿಂದ ಮಂಗಳೂರು ನಗರ ಪೊಲೀಸ್ ಕಮಿಷನರ್ಗೆ ಇಂದು ಮನವಿ ಸಲ್ಲಿಸಲಾಯಿತು.
ಕ್ರೈಸ್ತ ಧರ್ಮದ ಮುಖಂಡರು, ಜಿಲ್ಲಾ ಯುವ ಕಾಂಗ್ರೇಸ್ ನ ಸದಸ್ಯರು ಹಾಗೂ ಇತರ ಸಮಾನ ಮನಸ್ಕರ ತಂಡ ಇಂದು ಪೋಲಿಸ್ ಆಯುಕ್ತ ಟಿ,ಸುರೇಶ್ ಕುಮಾರ್ ಅವರಿಗೆ ಈ ಬಗ್ಗೆ ಲಿಖಿತ ದೂರು ಸಲ್ಲಿಸಿದರು. ಆರೋಪಿ ಅಕ್ಷರ್ ಬೋಳಿಯಮಜಲು ಸಾಮಾಜಿಕ ಜಾಲತಾಣ ಪೇಸ್ ಬುಕ್ ನಲ್ಲಿ ಏಸುಕ್ರಿಸ್ತ , ಮದರ್ ತೇರೆಸಾ ಬಗ್ಗೆ ಕೀಳು ಅಭಿರುಚಿಯ ಸಂದೇಶವನ್ನು ಪೋಸ್ಟ್ ಮಾಡಿದ್ದು ಆತನನ್ನು ತಕ್ಷಣ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಆ ಬಳಿಕ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ,ಮತೀಯ ನಿಂದನೆ, ಸಮಾಜಘಾತುಕ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪಿಯನ್ನು ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದರು.