ವಿಟ್ಲ, ಜೂ 22 (Daijiworld News/SM): ದ್ವಿಚಕ್ರ ವಾಹನವೊಂದಕ್ಕೆ ಸರ್ಕಾರಿ ಬಸ್ ಚಾಲನ ಸೈಡ್ ನೀಡಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆಯೊಂದು ವಿಟ್ಲದ ಮಾಣಿ ಎಂಬಲ್ಲಿ ಸಂಭವಿಸಿದೆ.
ಈ ಬಗ್ಗೆ ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ. ತಕ್ಷಣವೇ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮಂಗಳೂರು ಕಡೆಯಿಂದ ಮೈಸೂರುಗೆ ಕೆ ಎಸ್ ಆರ್ ಟಿಸಿ ಬಸ್ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್ ನೀಡಿಲ್ಲ ಎಂದು ಆರೋಪಿಸಿದ ದ್ವಿಚಕ್ರ ವಾಹನ ಸವಾರರು ಮಾಣಿ ಜಂಕ್ಷನ್ ನಲ್ಲಿ ಬಸ್ಸನ್ನು ತಡೆದಿದ್ದಾರೆ. ಹಾಗೂ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಪರಿಣಾಮ ಹೆದ್ದಾರಿಯಲ್ಲಿ ಕೆಲವು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಬಳಿಕ ವಿಟ್ಲ ಪೊಲೀಸರು ಆಗಮಿಸಿ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ಮುಂದುವರೆಸಿದ್ದಾರೆ.