ಬಂಟ್ವಾಳ, ಜೂ 22 (Daijiworld News/MSP): ಹಲಸು ಯಾರಿಗೆ ಇಷ್ಟವಿಲ್ಲ ಹೇಳಿ. ಈ ಹಣ್ಣು ಗಾತ್ರದಲ್ಲಿ ಹೇಗೆ ದೊಡ್ಡ ಸ್ಥಾನವನ್ನು ಪಡೆದುಕೊಂಡಿದೆಯೋ ಅದೇ ರೀತಿ ಅದರ ಬಳಕೆಯೂ ಕೂಡಾ ಬಹು ದೊಡ್ಡದು. ಕರಾವಳಿಗರ ಬಹು ನೆಚ್ಚಿನ ಹಣ್ಣನ್ನು ಅಡುಗೆಯಲ್ಲೂ ಧಾರಾಳವಾಗಿ ಬಳಸುತ್ತಾರೆ. ವಿಟಮಿನ್ ಎ. ವಿಟಮಿನ್ ಸಿ. ಪೊಟೊಷಿಯಂ ಕ್ಯಾಲ್ಸಿಯಂ, ಐರನ್ ಹಾಗೂ ಪೈಬರ್ ಅಂಶಗಳನ್ನು ಒಳಗೊಂಡ ಹಣ್ಣು ಆರೋಗ್ಯದ ವಿಚಾರದಲ್ಲೂ ಬಹು ಮಹತ್ತರವಾದ ಪ್ರಯೋಜನಗಳನ್ನು ಒಳಗೊಂಡಿದೆ.
ಆರೋಗ್ಯದ ಆಗರವಾಗಿರುವ, ಹಲಸಿನ ಹಣ್ಣನಿಂದ ಸೋಪ್ ತಯಾರಿಸಿ ಕರಾವಳಿಯ ಮಹಿಳೆಯೊಬ್ಬರು ಎಲ್ಲರಿಂದರೂ ಭೇಷ್ ಅನ್ನಿಸಿಕೊಂಡಿದ್ದಾರೆ. ಸದ್ಯ ಚೆನ್ನೈಯಲ್ಲಿ ನೆಲೆಸಿರುವ ಬಂಟ್ವಾಳ ತಾಲೂಕಿನ ವಿಟ್ಲದ ಅಪರ್ಣಾ ಹರೀಶ್ ಅವರು ಹಲಸನ್ನು ಅಡುಗೆಗಾಗಿ ಮಾತ್ರವಲ್ಲದೆ ಸೌಂದರ್ಯ ವರ್ಧಕವಾಗಿಯೂ ಬಳಸಬಹುದು ಎಂಬುದನ್ನು ಸಾಬೀತುಮಾಡಿದ್ದಾರೆ.
ಅಪರ್ಣಾ ಹರೀಶ್ ಅವರು ತಾವು ತಯಾರಿಸಿದ ಸೋಪಿಗೆ, 'ಝ್ಯ' ಎಂದು ಹೆಸರಿಟ್ಟಿದ್ದು, ಅವರ ಪರಿಚಯಸ್ಥರ ವಲಯದಲ್ಲಿ ಝ್ಯ' ಸೋಪು ಬಹಳ ಪ್ರಚಾರ ಗಿಟ್ಟಿಸಿಕೊಂಡಿದೆ. ಹಲಸಿನ ತೊಳೆ, ಕ್ಯಾಲಮಿನ್ ಪೌಡರ್, ತೆಂಗಿನೆಣ್ಣೆ, ಹರಳೆಣ್ಣೆಯನ್ನು ಬೆರೆಸಿ ತಯಾರಿಸಿರುವ ಈ ಸೋಪು ವಿಟಮಿನ್ ಸಿ ಮತ್ತು ಡಿ ಅಂಶಗಳನ್ನು ಒಳಗೊಂಡಿದೆ.
ಹಲಸಿನ ಹಣ್ಣಿನಿಂದ ಶ್ಯಾಂಪೂ, ಹಾಗೂ ಟಾಲ್ಕಂ ಪೌಡರ್ ಮಾಡಬೇಕು ಎಂಬ ಇಚ್ಚೆಯಿಂದ ಆ ಬಗ್ಗೆ ಅಧ್ಯಯನ ಹಾಗೂ ಪ್ರಯೋಗ ನಡೆಸುತ್ತಿದ್ದಾರೆ ಅಪರ್ಣಾ.
ಇದರೊಂದಿಗೆ ಚರ್ಮದ ಸೌಂದರ್ಯಕ್ಕಾಗಿ ಕೆಲವೊಂದು ಸೌಂದರ್ಯವರ್ಧಕ ಉತ್ಪನ್ನ ತಯಾರಿಸುವಲ್ಲಿ ನಿರತರಾಗಿದ್ದಾರೆ. ಚರ್ಮದ ಸೌಂದರ್ಯಕ್ಕಾಗಿ ಕೆಲವೊಂದು ಸೌಂದರ್ಯವರ್ಧಕ ಉತ್ಪನ್ನ ತಯಾರಿಕೆಗೂ ಪ್ರಯತ್ನಿಸುತ್ತಿದ್ದಾರೆ.