ಮಂಗಳೂರು, ಜೂ 22 (Daijiworld News/MSP): ಪೊಲೀಸ್ ಇಲಾಖೆಯಲ್ಲಿ ವಿಶೇಷ ಸೇವೆ ಸಲ್ಲಿಸಿದ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿ ಪದಕ ಪುರಸ್ಕಾರಕ್ಕೆ ಆಯ್ಕೆ ಆಗಿದ್ದು, ಈ ವಿಚಾರವನ್ನು ಎಡಿಜಿಪಿ ಡಾ.ಎಸ್.ಪರಶಿವಮೂರ್ತಿ ಪ್ರಕಟಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ಈ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳು ಬೆಂಗಳೂರಿನಲ್ಲಿ ಜುಲೈ 5 ರಂದು ನಡೆಯಲಿರುವ ರಾಜಭವನದ ಗಾಜಿನಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪದಕ ಪಡೆದುಕೊಳ್ಳಲಿರುವರು.
ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ವೆಲೈಂಟೆನ್ ಡಿ ಸೋಜಾ ಸೇರಿದಂತೆ ನಿವೃತ್ತ ಸಹಾಯಕ ಕಮಿಷನರ್ ಉದಯ ನಾಯಕ್, ಸಹಾಯಕ ಕಮಿಷನರ್ ಆಫ್ ಪೊಲೀಸ್ ಸಿಸಿಆರ್ಬಿಯ ವಿನಯ್ ಎ ಗಾಂವ್ಕರ್ ಮತ್ತು ಭ್ರಷ್ಟಾಚಾರ ನಿಗ್ರಹ ದಳದ ಡೆಪ್ಯುಟಿ ಸುಪರಿಂಟೆಂಟ್ ಆಫ್ ಪೊಲೀಸ್ ಸುಧೀರ್ ಎಂ ಹೆಗ್ಡೆ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಈ ಪೈಕಿ ವೆಲೆಂಟಿನ್ ಡಿ ಸೋಜಾ ಭಟ್ಕಳದಲ್ಲಿ ಡಿಎಸ್ಪಿ ಆಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಾರೆ. ಉದಯ್ ನಾಯ್ಕ್ ಅವರು ನಗರದ ವಿವಿಧ ಠಾಣೆಗಳಲ್ಲಿ ಇನ್ಸ್ ಫೆಕ್ಟರ್ ಆಗಿ ಸೇವೆ ಸಲ್ಲಿಸಿ ಲೋಕಾಯುಕ್ತದ ಸಹಾಯಕ ಕಮಿಷನರ್ ಆಗಿ ನಿವೃತ್ತಿಯಾಗಿದ್ದಾರೆ.