ಬೆಳ್ತಂಗಡಿ, ಜೂ 21 (Daijiworld News/MSP): 'ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯವನ್ನು ಸ್ವಾಗತಿಸುತ್ತೇನೆ' ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ. ಅವರು ಸಿಎಂ ಅವರ ಗ್ರಾಮ ವಾಸ್ತವ್ಯದ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಧರ್ಮಸ್ಥಳದಲ್ಲಿ ಜೂ.21 ರ ಶುಕ್ರವಾರ ಮಾತನಾಡಿದರು.
ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಮಾಡುವುದನ್ನು ನಾನು ಸ್ವಾಗತಿಸುತ್ತೇನೆ. ಹಿಂದೆ ಪ್ರಧಾನಿಯಾದ ರಾಜೀವ್ ಗಾಂಧಿ ಕೂಡ ಗ್ರಾಮ ವಾಸ್ತವ್ಯ ಪ್ರಾರಂಭಿಸಿದ್ದರು. ಅಂದು ಜನರ ಅಭಿವೃದ್ಧಿ ಬಗ್ಗೆ ಪ್ರಧಾನಿಗಳಿಗೆ, ಮುಖ್ಯಮಂತ್ರಿಗಳಿಗೆ, ಅಧಿಕಾರಿಗಳಿಗೆ ಸಿಗುತ್ತಿತ್ತು ಆದರೆ ಸಮಸ್ಯೆಗಳ ಬಗ್ಗೆ ಮಾಹಿತಿ ಸಿಗುತ್ತಿರಲಿಲ್ಲ ಎಂಬುದನ್ನು ಕಂಡಿದ್ದರು.
ಆದರೆ ಇದೀಗ ಮುಖ್ಯಮಂತ್ರಿಗಳು ಗ್ರಾಮವಾಸ್ತವ್ಯ ಮಾಡುವುದರಿಂದ ಜನರ ಸಮಸ್ಯೆಗಳನ್ನು ತಿಳಿಯಬಹುದು. ಅಧಿಕಾರಿಗಳು ಕೂಡ ಅಗತ್ಯ ಪರಿಹಾರ ನೀಡುತ್ತಾರೆಯೇ ನಿಜಕ್ಕೂ ಸಮಸ್ಯೆಗಳು ಏನೆಂದು ತಿಳಿಯುವುದಿಲ್ಲ. ಜನ ಅಧಿಕಾರಿಗಳ ಸುತ್ತ ಬರುವುದಕ್ಕಿಂತ ಅಧಿಕಾರಿಗಳೇ ಜನರ ಬಳಿ ಹೋಗಿ ಸಮಸ್ಯೆಯನ್ನು ಆಲಿಸಬೇಕು. ಸಮಸ್ಯೆ ಬಂದ ನಂತರ ಪರಿಹಾರ ನೀಡುವುದಕ್ಕಿಂತ ಸಮಸ್ಯೆ ಬಾರದ ಹಾಗೆ ಪರಿಹಾರ ನೀಡುವುದು ಸೂಕ್ತ. ಅದಕ್ಕಾಗಿ ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯವನ್ನು ಸ್ವಾಗತಿಸುತ್ತೇನೆ ಎಂದು ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಕ್ರಮವನ್ನು ಶ್ಲಾಘಿಸಿದರು.