ಮಂಗಳೂರು, ಜೂ20(Daijiworld News/SS): ನಗರದಲ್ಲಿ ಮಾದಕ ವಸ್ತು ಶೇಖರಿಸಿಟ್ಟುಕೊಂಡು ಮಾರಾಟಗಾರರಿಗೆ ನೀಡಿ ಜಾಲವನ್ನು ವಿಸ್ತರಿಸುತ್ತಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಸಮೀಪದ ಬೋಳೂರಿನ ಮೊನೀಶ್ (36) ಬಂಧಿತ ಆರೋಪಿ.
ಈತನಿಂದ 1,60,000 / - ಮೌಲ್ಯದ 16 ಗ್ರಾಂ ಕೊಕೇನ್ ಮತ್ತು ಕೊಕೇನ್ ತೂಕ ಮಾಡಲು ಬಳಸುತ್ತಿದ್ದ ಒಂದು ಸಣ್ಣ ತೂಕದ ಯಂತ್ರ, ರೂ. 80,000 ನಗದು, ಒಂದು ಸ್ಕೂಟರ್, 2 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಗೋವಾದಿಂದ ಮಾದಕ ವಸ್ತುಗಳನ್ನು ಖರೀದಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಈ ಮಾದಕ ವಸ್ತು ಮಾರಾಟ ಜಾಲದ ಹಿಂದೆ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.