ನವದೆಹಲಿ ಡಿ 6: ತಾವು ಅಥಾವಾ ಮನೆಯ ಸದಸ್ಯರು ಯಾರಾದರೂ ಕಾರಿನ ಮಾಲಕರಾಗಿದ್ದಾರೋ. ಹೌದಾದರೆ ನಿಮಗೆ ದೊರಕುವ ಅಡುಗೆ ಅನಿಲ ಸಬ್ಸಿಡಿ ನಷ್ಟವಾಗಲಿದೆ. ಅನಧಿಕೃತ ಸಬ್ಸಿಡಿಯನ್ನು ಇಲ್ಲದಾಗಿಸಲು ಕೇಂದ್ರ ಸರಕಾರ ಹೊಸ ಅಡುಗೆ ಅನಿಲ ನಿಯಮಗಳನ್ನು ರೂಪಿಸಲು ಯೋಚಿಸುತ್ತಿದೆ. ಮುಂದಿನ ಮಾರ್ಚ್ ತಿಂಗಳೊಳಗೆ ಅಡುಗೆ ಅನಿಲ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಯೋಜನೆ ಹಾಕಿಕೊಂಡಿರುವ ಸರಕಾರವು ಕಾರು ಮಾಲಕರನ್ನು ಅಥಾವಾ ಕಾರುಗಳನ್ನು ಹೊಂದಿರುವ ಕುಟುಂಬಗಳನ್ನು ಮೊದಲು ಗುರಿ ಮಾಡಲು ನಿರ್ಧರಿಸಿದೆ.ಬಿಸಿನೆಸ್ ಸ್ಟ್ಯಾಂಡರ್ಡ್ ಆನ್ ಲೈನ್ ಈ ಬಗ್ಗೆ ವರದಿ ಬಿತ್ತರಿಸಿದೆ.
ಕೇಂದ್ರ ಸರಕಾರದ ಪ್ರಕಾರ ದೇಶದಲ್ಲಿ ಸುಮಾರು 3.6 ಕೋ.ರು ಅನಧಿಕೃತ ಅಡುಗೆ ಅನಿಲ ಸಬ್ಸಿಡಿಯಿದೆ. ಇದಲ್ಲು ಇಲ್ಲವಾಗಿಸಿದ್ದಲ್ಲಿ ಸರಕಾರಿ ಖಜಾನೆಗೆ 30,000 ಕೋ.ರು ಲಾಭವಾಗಲಿದೆ ಹಾಗೂ ಅರ್ಹರಿಗೆ ಇದರ ಪ್ರಯೋಜನ ದೊರಕಲಿದೆ ಎಂದು ಸರಕಾರದ ವಾದ.
ಕಳೆದ ವರ್ಷವಷ್ಟೇ ಹತ್ತು ಲಕ್ಷಕ್ಕಿಂತ ಅಧಿಕ ವಾರ್ಷಿಕ ಅದಾಯವಿದ್ದ ಕುಟುಂಬಗಳನ್ನು ಅಡುಗೆ ಅನಿಲ ಸಬ್ಸಿಡಿ ವಿಭಾಗದಿಂದ ಹೊರಗಿಡಲಾಗಿತ್ತು.