ಕಾಸರಗೋಡು, ಜೂ 19 (Daijiworld News/MSP): ಕಾಸರಗೋಡು ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರು ರೋಗಿಗಳಿಂದ ಲಂಚ ಪಡೆದಿರುವುದಾಗಿ ಆರೋಪ ಕೇಳಿಬಂದಿದೆ.
ಪ್ರಕರಣವು ಬೆಳಕಿಗೆ ಬರುತ್ತಿದ್ದಂತೆ ವೈದ್ಯರನ್ನು ಅಮಾನತುಗೊಳಿಸುವಂತೆ ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಒತ್ತಾಯಿಸಿವೆ. ಡಿ ವೈ ಎಫ್ ಐ ಹಾಗೂ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರು ಜನರಲ್ ಆಸ್ಪತ್ರೆಗೆ ಮುತ್ತಿಗೆ ಹಾಕಿ, ಆಸ್ಪತ್ರೆ ಮುಖ್ಯಸ್ಥರನ್ನು ದಿಗ್ಬಂಧಗಳಿಸಿದ ಘಟನೆ ಜೂನ್ 18 ರ ಮಂಗಳವಾರ ಸಂಜೆ ನಡೆದಿದೆ.
ಜನರಲ್ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳಿಂದ ಲಂಚ ಪಡೆಯುತ್ತಿರುವ ಬಗ್ಗೆ ಹಲವು ಸಮಯಗಳಿಂದ ಆರೋಪ ಕೇಳಿಬರುತ್ತಿದೆ. ಕೆಲ ದಿನಗಳ ಹಿಂದೆ ಹರ್ನಿಯ ಶಸ್ತ್ರಚಿಕಿತ್ಸೆಗೆ ತಲಪಿದ ರೋಗಿಯಿಂದ ಇಬ್ಬರು ವೈದ್ಯರು ಐದು ಸಾವಿರ ರೂಪಾಯಿ ಪಡೆದಿರುವುದಾಗಿ ಆರೋಪ ಕೇಳಿ ಬಂದಿದೆ.
ಲಂಚ ಪಡೆಯುತ್ತಿರುವ ದೃಶ್ಯ ವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು , ಇದೀಗ ಆರೋಪಕ್ಕೆ ಸಿಲುಕಿರುವ ವೈದ್ಯರಾದ ಡಾ. ವೆಂಕಟಗಿರಿ ಮತ್ತು ಸರ್ಜನ್ ಡಾ. ಸುನಿಲ್ ಚಂದ್ರ ರನ್ನು ಸೇವೆಯಿಂದ ಅಮಾನತು ಗೊಳಿಸುವಂತೆ ಒತ್ತಾಯ ಕೇಳಿಬರುತ್ತಿದೆ.