ಕಾಸರಗೋಡು, ಜೂ 19 (Daijiworld News/MSP): ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ ಎಚ್1ಎನ್1 ಸೋಂಕು ಪತ್ತೆಯಾಗಿದೆ. ಮಳೆಗಾಲ ಆರಂಭವಾಗುತ್ತಿದಂತೆ ಸಾಂಕ್ರಾಮಿಕ ರೋಗ ಹರಡುತ್ತಿದ್ದು , ಇದರ ಜೊತೆಗೆ ಎಚ್1ಎನ್1 ವೈರಸ್ ಕಂಡುಬಂದಿದೆ.
ಎಚ್1ಎನ್1 ಸೋಂಕು ನಾಲ್ಕು ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು , ಈ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು , ಅಗತ್ಯ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ಪರವನಡ್ಕ ದಲ್ಲಿ ನಾಲ್ವರಲ್ಲಿ ರೋಗ ಪತ್ತೆಯಾಗಿದ್ದು, ಇವರ ರಕ್ತ , ಕಫದ ಮಾದರಿಯನ್ನು ತಜ್ಞ ವೈದ್ಯರ ತಂಡ ತಪಾಸಣೆ ನಡೆಸಿದ್ದು, ಮಣಿಪಾಲದ ಪ್ರಯೋಗಾಲಯದಿಂದ ಲಭಿಸಿದ ವರದಿಯಂತೆ ನಾಲ್ವರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕು ಹರಡದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮ ತೆಗೆದು ಕೊಂಡಿದೆ.
ಕಳೆದ ಫೆಬ್ರವರಿಯಲ್ಲಿ, ಪೆರಿಯದ ನವೋದಯ ವಿದ್ಯಾಲಯವೊಂದರಲ್ಲೇ ಐವರು ವಿದ್ಯಾರ್ಥಿಗಳಲ್ಲಿ ಎಚ್1ಎನ್1 ವೈರಸ್ ಪತ್ತೆಯಾಗಿತ್ತು. ಇದಲ್ಲದೆ ಈ ಶಾಲೆಯ ಸುಮಾರು 67ರಷ್ಟು ವಿದ್ಯಾರ್ಥಿಗಳಲ್ಲಿ ರೋಗ ಲಕ್ಷಣ ಕಂಡು ಬಂದಿತ್ತು. ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಫಲವಾಗಿ ಎಚ್1ಎನ್1 ಹತೋಟಿಗೆ ಬಂದಿತ್ತು.