ಕೊಚ್ಚಿ, ಡಿ 5:ವಾಹನ ನೊಂದಣಿ ಅವ್ಯವಹಾರ ಬೆಳಕಿಗೆ ಬಂದ ಹಿನ್ನಲೆಯಲ್ಲಿ ರಾಜ್ಯ ಸಭಾ ಸದಸ್ಯ, ಬಿಜೆಪಿ ನಾಯಕ ಹಾಗೂ ಸಿನೆಮಾ ನಟರಾದ ಸುರೇಶ್ ಗೋಪಿಯ ವಿರುದ್ಧ ಕ್ರೈಂ ಬ್ರಾಂಚ್ ಎಫ್ ಐಆರ್ ಧಾಕಲಿಸಿದೆ. ನಕಲಿ ವಿಳಾಸದಲ್ಲಿ ಕೇಂದ್ರಡಾಳಿತ ಪ್ರದೇಶವಾದ ಪುದುಚೇರಿಯಲ್ಲಿ ತಮ್ಮ ವಾಹನವನ್ನು ನೊಂದಾಯಿಸಿ ಕೇರಳ ಸರಕಾಕ್ಕೆ ಬ್ರಹತ್ತ್ ಮೊತ್ತದ ತೆರಿಗೆ ವಂಚಿಸಿದ ಆರೋಪದಲ್ಲಿ ಕ್ರೈಂ ಬ್ರಾಂಚ್ ಸುರೇಶ್ ಗೋಪಿ ವಿರುದ್ಧ ತನಿಖೆ ನಡೆಸುತ್ತಿದೆ.
ಈ ಮೊದಲು ಕ್ರೈಂ ಬ್ರಾಂಚ್ ಕಛೇರಿಯು ಸಂಸದರಲ್ಲಿ ಪುದುಚೇರಿಯಲ್ಲಿ ವಾಹನ ನೊಂದಾವಣೆ ಮಾಡಿದ ದಾಖಲೆಗಳನ್ನು ಕೇಳಿತ್ತು. ಇವುಗಳ ಪರಿಶೀಲನೆ ನಂತರ ದಾಖಲೆಗಳಲ್ಲಿ ನಮೂದಿಸಿದ್ದ ವಿಳಾಸ ನಕಲಿಯೆಂದು ಮೇಳ್ನೋಟಕ್ಕೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು.
ವಾಹನ ನೊಂದಣಿ ಅವ್ಯವಹಾರ ಹೊರತಾಗಿ ಸುರೇಶ್ ಗೋಪಿಯವರ ವಾಹನ ಹನ್ನೊಂದು ಬಾರಿ ಪ್ರಮುಖ ರಸ್ತೆಗಳಲ್ಲಿ ಮಿತಿಮೀರಿದ ಮೇಗದಲ್ಲಿ ಸಂಚರಿಸಿ ಭಯಾನಕ ವಾತಾವರಣ ಸೃಶ್ಟಿ ಮಾಡಿತ್ತು ಎಂದೂ ತನಿಖೆಯ ವೇಳೆ ತಿಳಿದು ಬಂದಿದೆ.