ಮಣಿಪಾಲ, ಮಾ.28 (DaijiworldNews/AK):ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) SCImago ಇನ್ಸ್ಟಿಟ್ಯೂಷನ್ ಶ್ರೇಯಾಂಕ 2025 ರಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಿದೆ. ಈ ಮೂಲಕ ಬಹು ವಿಭಾಗಗಳಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮತ್ತು ಗಮನಾರ್ಹ ಸುಧಾರಣೆಗಳನ್ನು ಸಾಧಿಸಿದೆ.


ಭಾರತದಲ್ಲಿನ ಪ್ರಮುಖ ಸಾಧನೆಗಳು (ವಿಶ್ವವಿದ್ಯಾಲಯ ವರ್ಗ)
ಒಟ್ಟಾರೆ ಶ್ರೇಣಿ: 7 ರಿಂದ 4ನೇ ಸ್ಥಾನಕ್ಕೇರಿಕೆ
ಸಂಶೋಧನಾ ಶ್ರೇಣಿ: 6 ರಿಂದ 3ನೇ ಸ್ಥಾನಕ್ಕೇರಿಕೆ
ನಾವೀನ್ಯತೆ ಶ್ರೇಣಿ: 137 ರಿಂದ 119ನೇ ಸ್ಥಾನಕ್ಕೇರಿಕೆ
ಸಾಮಾಜಿಕ ಶ್ರೇಣಿ: 4ನೇ ಸ್ಥಾನ ಕಾಯ್ದುಕೊಂಡಿದೆ
19 ವಿಶಾಲ ಮತ್ತು 41 ಕಿರಿಯ ವಿಷಯ ವಿಭಾಗಗಳಲ್ಲಿ ಮಾಹೆ ಗುರುತಿಸಿಕೊಂಡಿದೆ.
ಇದು ವೈವಿಧ್ಯಮಯ ಶೈಕ್ಷಣಿಕ ವಿಭಾಗಗಳಲ್ಲಿ ಅದರ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿದೆ.ಈ ಕುರಿತಾಗಿ ಮಾಹೆಯ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಅವರು ಮಾತನಾಡಿ, "ಇದು SCImago ಇನ್ಸ್ಟಿಟ್ಯೂಷನ್ ಶ್ರೇಯಾಂಕ 2025 ದಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ನ ಗಮನಾರ್ಹ ಸಾಧನೆಯಾಗಿದೆ, ಮಾತ್ರವಲ್ಲದೆ ಜಾಗತಿಕವಾಗಿ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಪ್ರಭಾವ ಬೀರಲು ಮಾಹೆಯ ಬದ್ಧತೆಯನ್ನು ಸಾಬೀತುಪಡಿಸುತ್ತದೆ." ಎಂದಿದ್ದಾರೆ.
ಈ ಮೈಲಿಗಲ್ಲು ಶೈಕ್ಷಣಿಕ ಉತ್ಕೃಷ್ಟತೆ, ಸಂಶೋಧನೆಯ ಪ್ರವರ್ತಕನಾಗಿ ಮತ್ತು ಅರ್ಥಪೂರ್ಣ ಸಾಮಾಜಿಕ ಕೊಡುಗೆಗಳೊಂದಿಗೆ ಮಾಹೆಯ ಸಮರ್ಪಣೆಯನ್ನು ಪ್ರತಿಬಿಂಬಿಸಿದೆ. ಹೊಸ ಮಾನದಂಡಗಳ ಮೂಲಕ ಜ್ಞಾನ ಗಳಿಕೆಯಲ್ಲಿ ಪ್ರಗತಿಯ ಹಾದಿಯೊಂದಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಜಾಗತಿಕವಾಗಿ ಶಿಕ್ಷಣ ಮತ್ತು ನಾವೀನ್ಯತೆಗಳಲ್ಲಿ ಮುಂಚೂಣಿಯಲ್ಲಿದೆ.
SCImago ಸಂಸ್ಥೆಗಳ ಶ್ರೇಯಾಂಕಗಳ ಬಗ್ಗೆ (SIR)
SCImago ಸಂಸ್ಥೆಗಳ ಶ್ರೇಯಾಂಕಗಳು (SIR) ಶೈಕ್ಷಣಿಕ ಮತ್ತು ಸಂಶೋಧನೆ-ಸಂಬಂಧಿತ ಸಂಸ್ಥೆಗಳ ವರ್ಗೀಕರಣವಾಗಿದ್ದು, ಸಂಯೋಜಿತ ಸೂಚಕದಿಂದ ಶ್ರೇಣೀಕರಿಸಲಾಗುತ್ತದೆ. ಇದು ಸಂಶೋಧನಾ ಕಾರ್ಯಕ್ಷಮತೆ, ನಾವೀನ್ಯ ಉತ್ಪನ್ನಗಳು ಮತ್ತು ಸಾಮಾಜಿಕ ಪ್ರಭಾವದ ಬಗ್ಗೆ ಅವುಗಳ ವೆಬ್ ಗೋಚರತೆಯ ಆಧಾರದ ಮೇಲೆ ಮೂರು ವಿಭಿನ್ನ ವರ್ಗದ ಸೂಚಕಗಳನ್ನು ಹೊಂದಿದೆ. ಜರ್ನಲ್ಗಳು ಮತ್ತು ದೇಶದ ವೈಜ್ಞಾನಿಕ ಸೂಚಕಗಳು ಸ್ಕೋಪಸ್ ಡೇಟಾಬೇಸ್ನಲ್ಲಿನ ಮತ್ತು ಎಲ್ಸೆವಿಯರ್ ಬಿ.ವಿ.ಯಿಂದ ಅಭಿವೃದ್ಧಿಗೊಂಡವುಗಳಾಗಿವೆ.