ಉಡುಪಿ ಡಿ 05: ಪ್ರಧಾನಿ ನರೇಂದ್ರ ಮೋದಿಯನ್ನು ಹೋಲುವ ಹಿರಿಯಡ್ಕದ ಸದಾನಂದ ನಾಯಕ್ ಹಾಗೂ ಗಾಂಧೀಜಿಯನ್ನು ಹೋಲುವ ಉಡುಪಿ ಮೂಲದ ಆಗಸ್ಟಿನ್ ಅಲ್ಮೇಡಾರಿಗೆ ಈಗ ಗುಜರಾತ್ ನಲ್ಲಿ ಭಾರೀ ಬೇಡಿಕೆ ಬಂದುಬಿಟ್ಟಿದೆ. ಅವರು ಹೋದಲೆಲ್ಲಾ ಕ್ಯಾಮೆರಾ ಬೆಳಕು ಚೆಲ್ಲುತ್ತದೆ. ಸೆಲ್ಫಿಗಾಗಿ ಜನ ಮುಗಿಬೀಳುತಿದ್ದಾರೆ. ಇದೀಗ ಇವರು ಗುಜರಾತ್ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಗುಜರಾತ್ ತಲುಪಿದ್ದಾರೆ. ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಳಿಕ ಅಹಮದಬಾದ್ ನ ಗಾಂಧೀ ಆಶ್ರಮಕ್ಕೂ ಭೇಟಿ ನೀಡಿದರು. ಗಾಂಧೀಜಿ ಮೋದಿಯಂತೆ ಸರಳವಾಗಿರುವ ಇವರಲ್ಲಿ ಇಂದಿಗೂ ಸ್ಮಾರ್ಟ್ ಪೋನ್ ಗಳಿಲ್ಲ ಆದರೂ ಇವರ ಜನಪ್ರೀಯತೆಗೆ ಏನೂ ಕಮ್ಮಿ ಇಲ್ಲ.
ಇತ್ತೀಚೆಗೆ ಇವರು ಉಜಿರೆಯಲ್ಲಿ ಪ್ರದಾನಿ ನರೇಂದ್ರ ಮೋದಿ ಭೇಟಿಕೊಟ್ಟಾಗ ಈ ನಕಲಿಗಳಿಬ್ಬರೂ ಮಿಂಚಿದ್ದರು. ಉಡುಪಿಯಲ್ಲಿ ಧರ್ಮಸಂಸದ್ ನಲ್ಲೂ ಜನಾಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಮೋದಿಯ ಪ್ರತಿರೂಪದಂತೆ ಕಾಣುವ ಸದಾನಂದ ( 59) ವೃತ್ತಿಯಲ್ಲಿ ಹೋಟೇಲ್ ಕೆಲಸಗಾರರಾಗಿ ನಿವೃತ್ತಿಯಾಗಿದ್ದಾರೆ.
ಇನ್ನು ಆಗಸ್ಟಿಲ್ ಅಲ್ಮೇಡಾ(71) ಅವರು ಸಮುದ್ರದಡಿಯಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು. ಹಾಗಾಗಿ ಉಡುಪಿ ತವರೂರಾದರೂ ವಾಸವಾಗಿದ್ದು ಮುಂಬಯಿಯಲ್ಲೇ. ಒಟ್ಟಾರೆ ಸೆಲ್ಫಿ ಪ್ರಿಯರ ಹಾಗೂ ಬಿಜೆಪಿಯ ಪಾಲಿನ ಅಚ್ಚುಮೆಚ್ಚಿನ ಪ್ರತಿರೂಪಗಳಾಗಿದ್ದಾರೆ.