ಮಂಗಳೂರು,ಮಾ.25(DaijiworldNews/AK): ಸದನದಲ್ಲಿ ಪ್ರತಿಭಟನೆ ನಡೆದಾಗ ನಾನೇನೂ ತಪ್ಪು ಮಾಡಿಲ್ಲ. ವಿನಾಕಾರಣ ನನ್ನ ಹೆಸರು ಸೇರಿಸಿದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಘಟನೆಯ ನಂತರ ಸ್ಪೀಕರ್ ಮಾತುಕತೆ ನಡೆಸಿದ್ದು, ತಪ್ಪು ಒಪ್ಪಿಕೊಂಡರೆ ಆರು ತಿಂಗಳ ನಿಷೇಧವನ್ನು ಕಡಿಮೆ ಮಾಡಬಹುದು ಎಂದಿದ್ದಾರೆ. ಆದರೆ ನಾನು ತಪ್ಪೇ ಮಾಡದಿರುವಾಗ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.