ಮಂಗಳೂರು,ಜೂ15(Daijiworldnews/AZM):ಮರ ರಾಕ್ಷಸರೆಂದೇ ಖ್ಯಾತಿ ಹೊಂದಿರುವ ಎನ್ ಇ ಸಿ ಎಫ್ ನ ಕಟ್ಟಾಳು ಜೀತ್ ಎಂಬವರು ನಂದಿಗುಡ್ಡೆ ಸ್ಮಶಾನದಲ್ಲಿ ಇಂದು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ಸೇರಿ ಕೇವಲ 10 ಗಂಟೆಗಯ ಅವಧಿಯಲ್ಲಿ 1052 ಗಿಡಗಳನ್ನು ನೆಟ್ಟು ದಾಖಲೆ ಸೃಷ್ಠಿಸಿದ್ದಾರೆ.
ಈಗಿನ ಆಧುನಿಕ ಕಾಲದಲ್ಲಿ ಮರಗಳನ್ನು ಕಡಿಯುವವರೇ ಹೆಚ್ಚಾಗಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದು, ಬಿಲ್ಡೀಂಗ್ ಗಳು ತಲೆ ಎತ್ತುತ್ತಿರುವ ಈಗಿನ ಕಾಲದಲ್ಲಿ ವೃಕ್ಷ ಪ್ರಿಯರಾಗಿರುವ ಜೀತ್ ತಮ್ಮ ಕುಟುಂಬ ಸಮೇತ ಸೇರಿ ಕೇವಲ 10 ಗಂಟೆಗಳಲ್ಲಿ 1052 ಗಿಡಗಳನ್ನು ನೆಟ್ಟು ದಾಖಲೆ ಸೃಷ್ಠಿಸಿದ್ದಾರೆ. ಇವರಿಗೆ ಎಷ್ಟು ಗಿಡಗಳನ್ನು ನೆಟ್ಟರೂ ಕೂಡಾ ತೃಪ್ತಿ ಇಲ್ಲವಂತೆ. ಹಾಗಾಗಿ ವರ್ಷದ ೩೭೫ ದಿನಗಳಲ್ಲೂ ಗಿಡಗಳನ್ನು ನೆಟ್ಟು ಅವುಗಳ ಪಾಲನೆಯಲ್ಲಿ ತಮ್ಮ ಕುಟುಂಬ ಸಮೇತ ತೊಡಗಿಕೊಳ್ಳುತ್ತಾರೆ.
ವೃಕ್ಷ ಪ್ರೇಮಿಯಾಗಿರುವ ಇವರು ನಿಜವಾದ ಪರಿಸರ ಪ್ರೇಮಿ ಎಂದು ಹೇಳುವುದರಲ್ಲಿ ತಪ್ಪಿಲ್ಲ.