ಬಂಟ್ವಾಳ, ಮಾ.21(DaijiworldNews/AK): ಕರುನಾಡ ಸ್ಪೈಡರ್ ಮ್ಯಾನ್ ಎಂದು ಪ್ರಸಿದ್ದಿ ಪಡೆದಿರುವ ಜ್ಯೋತಿರಾಜ್ ಅವರು, ಇತಿಹಾಸ ಪ್ರಸಿದ್ದ ಕಾಂರಿಂಜೇಶ್ವರ ದೇವಸ್ಥಾನದ ಬೆಟ್ಟವನ್ನು ಏರುವ ಸಾಹಸಕ್ಕೆ ಮುಂದಾಗಿದ್ದಾರೆ.

ಮಾ.23 ರ ಬೆಳಿಗ್ಗೆ 10 ಗಂಟೆಗೆ ಸಮುದ್ರಮಟ್ಟದಿಂದ ಸಾವಿರ ಅಡಿ ಎತ್ತರದಲ್ಲಿರುವ ಕಾಮರಿಂಜೇಶ್ವರ ಬೆಟ್ಟವನ್ನು ಏರುತ್ತಿದ್ದೇನೆ, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಬೆಟ್ಟ ಹತ್ತಲು ಎಲ್ಲಾ ರೀತಿಯ ಅನುಮತಿ ದೊರೆತಿದೆ. ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕಿನ ಜನತೆ ಸಹಕರಿಸಬೇಕು ಎಂದವರು ಮನವಿ ಮಾಡಿದ್ದಾರೆ.