ಸುಳ್ಯ ,ಡಿ 04 : ಸ್ವಚ್ಚತಾ ರಾಯಭಾರಿಯನ್ನಾಗಿ ನೇಮಿಸಿ ಬಳಿಕ ನಗರ ಪಂಚಾಯತ್ ಅವಮಾನ ಮಾಡಿದೆ ಎಂದು ಆರೋಪಿಸಿ ಸುಳ್ಯದ ಅಕಾಡೆಮಿ ಆಪ್ ಲಿಬರಲ್ ಏಜ್ಯಕೇಶನ್ ಅಧ್ಯಕ್ಷ ಡಾ.ಚಿದಾನಂದ ಸ್ವಚ್ಚತಾ ರಾಯಭಾರಿ ಹುದ್ದೆಗೆ ಡಿ 4 ರಂದು ರಾಜೀನಾಮೆ ಸಲ್ಲಿಸಿದ್ದಾರೆ. ತನ್ನ ಮನೆಯ ಕಂಪೌಂಡ್ ಮತ್ತು ನಗರ ಪಂಚಾಯತ್ ಕಚೇರಿಯ ಸ್ಥಳದ ಗಡಿಯಲ್ಲಿ ಕಸ ತನ್ನ ಅಂಗಳಕ್ಕೆ ಬಾರದಂತೆ ತಡೆಯುವ ಉದ್ದೇಶದಿಂದ ಡಾ.ಚಿದಾನಂದ ನಗರ ಪಂಚಾಯತ್ನ ಸ್ವಚ್ಚತಾ ರಾಯಭಾರಿ ಚಿದಾನಂದರು ಹೂವಿನ ಗಿಡಗಳನ್ನು ನೆಟ್ಟಿದ್ದರು .ಆದರೆ ಇದನ್ನು ನಗರ ಪಂಚಾಯತ್ ಕಡಿದು ಹಾಕಿದ ಹಿನ್ನಲೆಯಲ್ಲಿ ತೀವ್ರ ಅವಮಾನಕ್ಕೆ ಒಳಗಾದ ಡಾ.ಚಿದಾನಂದರು ಸ್ಚಚ್ಚತಾ ರಾಯಭಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಚಿದಾನಂದರ ಪರವಾಗಿ ಅವರ ಮಗ ಕೆ.ಸಿ ಅಕ್ಷಯ್ ನಗರ ಪಂಚಾಯತ್ ಮುಖ್ಯಾಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕೆ.ವಿ.ಜಿ ಮೆಡಿಕಲ್ ಕಾಲೇಜು ಹಾಗೂ ಆರ್ಯವೇದ ಕಾಲೇಜಿನ ಸಿಬ್ಬಂದಿಗಳು ಹಾಜರಿದ್ದರು.