ಉಡುಪಿ, ಮಾ.19(DaijiworldNews/TA) : ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ 2024-25 ನೇ ಸಾಲಿನ ವಾರ್ಷಿಕ ಸಮಾರಂಭ ಮಾರ್ಚ್ 2೦ ರಿಂದ 23ರ ವರೆಗೆ ವಿದ್ಯಾರ್ಥಿಗಳಿಗಾಗಿ ನಡೆಯಲಿದೆ ಎಂದು ಶೈಕ್ಷಣಿಕ ವರ್ಷ ವಾರ್ಷಿಕೊತ್ಸವದ ಕಾರ್ಯದರ್ಶಿ ರತ್ನಕುಮಾರ್ ತಿಳಿಸಿದರು.

ಕಾಲೇಜಿನ ಸಭಾಂಗಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡುತ್ತಾ, ಮಾರ್ಚ್ 2೦ ಮತ್ತು 21ರಂದು ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ತಾಂತ್ರಿಕ –ಸಾಂಸ್ಕೃತಿಕ ಸ್ಪರ್ಧೆ ವರ್ಣೋತ್ಸವ 2೦25 ಆಯೋಜಿಸಲಾಗಿದೆ. ಮಾರ್ಚ್ 20 ರಂದು ಬೆಳಗ್ಗೆ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಬೆಳಗ್ಗೆ 9.3೦ ಕ್ಕೆ ನಡೆಯಲಿದ್ದು ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನ ಇದರ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿಗಳು ಸಮಾರಂಭ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ಪವನ್ ಕುಮಾರ್ ಶೆಟ್ಟಿ,ಮುಖ್ಯ ಅತಿಥಿಗಳಾಗಿ ಹಿರಿಯ ಪ್ರಾಧ್ಯಾಪಕರಾದ ದಲ್ಲಾಸ್ ಮತ್ತು ಉಷಾ ರಾಮಚಂದ್ರ ಭಟ್, ಸಮಾರಂಭದ ಅಧ್ಯಕ್ಷತೆಯನ್ನು ರತ್ನಕುಮಾರ್ ಇವರು ವಹಿಸಲಿದ್ದಾರೆ.
ವರ್ಣೋತ್ಸವದ ಸಮಾರೋಪ ಸಮಾರಂಭವು ಶುಕ್ರವಾರ ಮಾರ್ಚ್ 21 ರಂದು ಸಂಜೆ ನಡೆಯಲಿದೆ. ಈ ಸಮಾರಂಭದಲ್ಲಿ ಬೆಂಗಳೂರಿನ ಮಿರಾಫ್ರ ಟೆಕ್ನಾಲಜಿಸ್ ಪ್ರಾಕ್ಟಿಸ್ ಹೆಡ್ ವಿನೋದ್ ಜಾನ್, ಖ್ಯಾತ ಚಿತ್ರ ರಂಗದ ಕಲಾವಿದ ಪ್ರಥ್ವಿ ಅಂಬರ್ ಗೌರವ ಅತಿಥಿಗಳಾಗಿ ಬಾಗವಹಿಸಲಿದ್ದಾರೆ,ಸಮಾರಂಭದ ಅಧ್ಯಕ್ಷತೆಯನ್ನು ಪರಮಪೂಜ್ಯ ಶ್ರೀ ಸೊದೆ ಶ್ರೀ ಪಾದರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಅದರಂತೆ ಅದೇ ದಿನ ಸಂಜೆ ಕಾಲೇಜಿನ ಯಕ್ಷಗಾನ ಸಂಘ ಯಕ್ಷ ಸಿಂಚನ ನ ವಿದ್ಯಾರ್ಥಿಗಳಿಂದ 3 ಗಂಟೆಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಾರ್ಚ್ 22 ರಂದು ಕಾಲೇಜು ವಾರ್ಷಿಕೊತ್ಸವ ಸಮಾರಂಭವು ಸಂಸ್ಥೆಯ ಆವರಣದಲ್ಲಿ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀ ಪಾದರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಧ್ಯಾಹ್ನ 3 ಗಮ್ಟೆಗೆ ಸಭಾ ಕಾರ್ಯಕ್ರಮದೊಂದಿಗೆ ಸಮಾರಂಭ ಆರಂಭಗೊಳ್ಳಲಿದ್ದು ಸಭಾ ಕಾರ್ಯಕ್ರಮ, ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮಾಪನಗೊಳ್ಳಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ತಿರುಮಲೇಶ್ವರ ಭಟ್,ಪ್ರಾಧ್ಯಪಕ ಸಚಿನ್ ಪ್ರಭ್, ಶಿಲ್ಪಾ ಕಾಮತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.