ಬೆಳ್ತಂಗಡಿ, ಜೂ15(Daijiworld News/SS): ತಾಲೂಕಿನ ಹೇರ್ ಡ್ರೆಸ್ಸ್ಸಸ್ ಹಾಗೂ ಫ್ಯಾನ್ಸಿ ಅಂಗಡಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್'ನಿಂದಾಗಿ ಬೆಂಕಿ ತಗಲಿದ್ದು, ಅಂಗಡಿ ಸಂಪೂರ್ಣ ಭಸ್ಮಗೊಂಡಿದೆ.
ತಾಲೂಕಿನ ಲ್ಯಾಲ ಗ್ರಾಮದ ರಾಘವೇಂದ್ರ ನಗರ ನಿವಾಸಿ ಕೇಶವ ಭಂಡಾರಿ ಎಂಬವರು ಬೆಳ್ತಂಗಡಿ ಬಸ್ ಸ್ಟಾಂಡ್'ನಲ್ಲಿ ಸ್ಟೈಲೋ ಹೇರ್ ಡ್ರೆಸ್ಸ್ಸಸ್ ಹಾಗೂ ಫ್ಯಾನ್ಸಿ ಅಂಗಡಿ ನಡೆಸುತ್ತಿದ್ದರು. ಜೂ.14ರ ರಾತ್ರಿ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್'ನಿಂದಾಗಿ ಅಂಗಡಿಗೆ ಬೆಂಕಿ ತಗಲಿದ್ದು, ಸಂಪೂರ್ಣ ಭಸ್ಮಗೊಂಡಿದೆ.
ವಿದ್ಯುತ್ ಅವಘಡದಿಂದ ಅಂಗಡಿ ಭಸ್ಮಗೊಂಡು ಅಪಾರ ನಷ್ಟವಾಗಿದೆ. ಅಂಗಡಿಯಲ್ಲಿದ್ದ ಬೆಲೆ ಬಾಳುವ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿದೆ.
ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಅಗ್ನಿ ನಂದಿಸಿ ಹೆಚ್ಚಿನ ಅವಘಡ ಆಗುವುದನ್ನು ತಪ್ಪಿಸಿದ್ದಾರೆ. ಜೊತೆಗೆ, ಕೇಶವ ಭಂಡಾರಿ ಅವರಿಗೆ ತಾಲೂಕಿನ ಶಾಸಕರದ ಹರೀಶ್ ಪೂಂಜರವರು ವಿಷಯ ತಿಳಿದ ಕೂಡಲೇ ಕರೆ ಮಾಡಿ ಧೈರ್ಯ ತುಂಬಿದ್ದಾರೆ.