ಮಂಗಳೂರು, ಮಾ.06 (DaijiworldNews/AA): ಮಾದಕ ವಸ್ತು ಸೇವನೆಗೆ ಸಂಬಂಧಿಸಿದಂತೆ ಬಂದರು ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ನಗರದ ಬಾವುಟಗುಡ್ಡೆ ಬಳಿ ಅಮಲು ಪದಾರ್ಥ ಸೇವಿಸಿದ ಆರೋಪದಡಿ ಪಡುಪಣಂಬೂರು ನಿವಾಸಿ ಅನೀಶ್ ಭಂಡಾರಿ (30) ಹಾಗೂ ಸೆಂಟ್ರಲ್ ಮಾರ್ಕೆಟ್ ಬಳಿ ಅಮಲು ಪದಾರ್ಥ ಸೇವಿಸಿದ ಆರೋಪದಡಿ ಪಾಂಡೇಶ್ವರ ನಿವಾಸಿ ಜಾಗ್ರತ್ (20) ಎಂಬಾತನನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.