ಕಾರ್ಕಳ, ಮಾ.06 (DaijiworldNews/AA): ಪಶ್ವಿಮಘಟ್ಟ ತಪ್ಪಲು ತೀರಾ ಪ್ರದೇಶ ಕಾರ್ಕಳ ತಾಲೂಕು ಈದು ಗ್ರಾಮದ ಬಲ್ಲೊಟ್ಟು ಎಂಬಲ್ಲಿ ನಕ್ಸಲ್ ವಿರುದ್ಧ ಕಾರ್ಯಚರಣೆಯಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದು, ಘಟನೆಯಿಂದ ಮನೆ ಬಹುತೇಕ ಹಾನಿಗೊಳಗಾಗಿತ್ತು. ಘಟನೆ ನಡೆದು 21 ವರ್ಷಗಳ ಬಳಿಕ ಸರಕಾರದಿಂದ ಪರಿಹಾರ ಧನಕ್ಕಾಗಿ ಮನೆ ಮಂದಿ ನ್ಯಾಯೋಚಿತ ಬೇಡಿಕೆ ಮುಂದಿಟ್ಟು ಉಡುಪಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.


ಘಟನೆಯ ವಿವರ....
ಪಶ್ವಿಮ ಘಟ್ಟದ ತಪ್ಪಲು ತೀರಾ ಪ್ರದೇಶದ ಈದು ಗ್ರಾಮದ ಬಲ್ಲೊಟ್ಟು ರಾಮಪ್ಪ ಪೂಜಾರಿಯ ಮನೆಯಲ್ಲಿ 2003 ನವಂಬರ್ 17ರ ರಾತ್ರಿ ಪೊಲೀಸರು ನಡೆಸಿದ ಎನ್ ಕೌಂಟರ್ ಗೆ ಹಾಜಿಮ್ಮಾ ಹಾಗೂ ಪಾರ್ವತಿ ಬಲಿಯಾಗಿದ್ದು, ಯಶೋಧಾ ಕೂದಲೆಳೆಯ ಅಂತರದಲ್ಲಿ ಬದುಕಿ ಉಳಿದಿದ್ದಳು.
ಈ ಘಟನೆಯು ಪೊಲೀಸರು ಹಾಗೂ ನಕ್ಸಲೀಯರ ನಡುವೆ ನಡೆದಿದ್ದ ಗುಂಡಿನ ಚಕಮುಖಿಯಾಗಿದ್ದು, ಘಟನೆ ನಡೆದಿದ್ದ ರಾಮಪ್ಪ ಪೂಜಾರಿಯವರ ಮನೆ ಹಾನಿಗೊಳಗಾಗಿತ್ತು. ಈ ನಡುವೆ ರಾಜ್ಯದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದಿದ್ದು, ಹಲವು ಮಂದಿ ಅಧಿಕಾರಗಳು ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿಷ್ಠೆ ತೋರಿದ್ದಾರೆ.
ಹಾನಿಗೊಳ್ಳಗಾಗಿದ್ದ ಈದು ಗ್ರಾಮದ ಬಲ್ಲೊಟ್ಟು ರಾಮಪ್ಪ ಪೂಜಾರಿ ಅವರಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭರವಸೆ ನೀಡಿ, ಮನೆ ನಿರ್ಮಾಣಕ್ಕೆ ನೆರವಿನ ಭರವಸೆ ನೀಡಿದ್ದರು. ಭರವಸೆಗಳ ನಡುವೆ ರಾಮಪ್ಪ ಪೂಜಾರಿ ಇಹಲೋಕ ತ್ಯಜಿಸಿದ್ದು, ಶಿಥಿಲಗೊಂಡಿದ್ದ ಮನೆ ವಾಸಕ್ಕೂ ಅಯೋಗ್ಯವಾಗಿತ್ತು.
ಆಗಿನ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ಚಿರಂಜೀವಿ ಸಿಂಗ್ ಘಟನೆ ನಡೆದಿದ್ದ ಮನೆಗೆ ಭೇಟಿ ನೀಡಿ ಪರಿಹಾರ ಒದಗಿಸುವ ಭರವಸೆ ನೀಡಿರುವುದನ್ನು ಸ್ಮರಿಸಬಹುದು. ರಾಮಪ್ಪ ಪೂಜಾರಿಯ ಕನಸ್ಸಿನಂತೆ ಅವರ ಜಾಗವನ್ನು ಅಡವಿಟ್ಟು ಸಾಲ ಪಡೆದು, ಆರ್ ಸಿಸಿ ಮನೆಯನ್ನು ಅವರ ಮನೆ ಮಂದಿ ನಿರ್ಮಿಸಿದ್ದರು.
ಪ್ರಸ್ತುತ ದಿನಗಳಲ್ಲಿ ಅವರ ಮನೆ ಮಂದಿ ಆರ್ಥಿಕ ಸಮಸ್ಯೆಯಿಂದ ಕಂಗಲಾಗಿದ್ದು, ಸಾಲದ ಕಂತು ಸಮಪರ್ಕವಾಗಿ ಪಾವತಿಸಲಾಗುತ್ತಿಲ್ಲ. ಮನೆ ಮನೆಯ ಜೀವನ ತೂಗೂಯ್ಯಾಲೆ ಯಂತಿದೆ.
2025 ನವಂಬರ್ ಮೊದಲವಾರದಂದು ಈದು ಗ್ರಾಮದಲ್ಲಿ ಮತ್ತೇ ನಕ್ಸಲೀಯರು ಕಾಣಸಿಕ್ಕಿದ್ದು, ಪೊಲೀಸರ ಮಹತ್ವ ಸಾಧನೆಯಿಂದ ನ.18 ರಂದು ಪೊಲೀಸರು ನಡೆಸಿದ ಎನ್ ಕೌಂಟರ್ ಗೆ ನಕ್ಸಲ್ ವಾದಿ ವಿಕ್ರಂ ಗೌಡ ಹತನಾಗಿದ್ದನು. ನಂತರದಲ್ಲಿ ಬೆರಳೆಣಿ ಸಂಖ್ಯೆಯಲ್ಲಿ ನಕ್ಸಲೀಯರು ಸರಕಾರದ ಮುಂದೆ ಶರಣಾಗಿ ಮುಖ್ಯವಾಹಿನಿ ಬರುವುದರೊಂದಿಗೆ ಕರ್ನಾಟಕವು ನಕ್ಸಲ್ ಮುಕ್ತ ರಾಜದತ್ತ ಹೆಜ್ಜೆ ಇಟ್ಟಿರುವುದು ಅತ್ಯಂತ ಸಂತಸ ತಂದಿದೆ.
ಈ ಅವಧಿಯಲ್ಲಿ ಶೋಷಿತವಾಗಿರುವ ನಮ್ಮ ಬಡ ಕುಟುಂಬಕ್ಕೂ ಸರಕಾರದಿಂದ ಸೂಕ್ತ ಪರಿಹಾರಧನ ಒದಗಿಸುವಂತೆ ಮನೆ ಮಂದಿ ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಶಾಂತ್ ಪೂಜಾರಿ ಅವರು ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಗೃಹಸಚಿವರು, ಮುಖ್ಯಮಂತ್ರಿ ಇವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಯಶೋಧರ ಪೂಜಾರಿ ಬೊಲ್ಲೊಟ್ಟು, ಸುಧಾಕರ ಪೂಜಾರಿ ಬೊಲ್ಲೊಟ್ಟು, ಈದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುರುಷೋತ್ತಮ. ಕೆ, ಮಲೆಕುಡಿಯ ಸಂಘದ ರಾಜ್ಯ ಅಧ್ಯಕ್ಷ ಶ್ರೀಧರ್ ಗೌಡ ಮೊದಲಾದವರು ಉಪಸ್ಥಿತರಿದ್ದರು.