ಮಂಗಳೂರು, ಜೂ14(Daijiworld News/SS): ಪ್ರತಿಷ್ಠಿತ ವೀಕ್ ಹನ್ಸ್ ಸರ್ವೆ - 2019 ನಡೆಸಿದ ಭಾರತದ ಉನ್ನತ ವಿಜ್ಞಾನ ಕಾಲೇಜುಗಳ ಸಮೀಕ್ಷೆಯಲ್ಲಿ ಮಂಗಳೂರಿನ ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜು, ಅಖಿಲ ಭಾರತ ಮಟ್ಟದಲ್ಲಿ 317 ಅಂಕಗಳನ್ನು ಗಳಿಸಿ 22ನೇ ರ್ಯಾಂಕ್ನ್ನು ತನ್ನದಾಗಿಸಿಕೊಂಡಿದೆ. ಹಾಗೆಯೇ ರಾಜ್ಯಕ್ಕೆ 4ನೇ ಸ್ಥಾನ ಪಡೆದು ಅತ್ಯುನ್ನತ ವಿಜ್ಞಾನ ಕಾಲೇಜು ಎಂಬ ಹಿರಿಮೆಗೆ ಪಾತ್ರವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಉನ್ನತ ಸ್ಥಾನ ಪಡೆದ ಮೂರು ಕಾಲೇಜುಗಳಿಗೆ ಪೈಕಿ ಸಂತ ಅಲೋಶಿಯಸ್ ಕಾಲೇಜು ಕೂಡ ಒಂದಾಗಿದೆ. ರಾಷ್ಟ್ರಮಟ್ಟದಲ್ಲಿ 317 ಸಂಯೋಜಿತ ಅಂಕಗಳಿಂದ 22ನೇ ಸ್ಥಾನವನ್ನು ಕಾಲೇಜು ತನ್ನದಾಗಿಸಿಕೊಂಡಿದೆ. ಮಾನವಶಾಸ್ತ್ರ ವಿಭಾಗದಲ್ಲಿ 274 ಸಂಯೋಜಿತ ಅಂಕಗಳೊಂದಿಗೆ 44ನೇ ಸ್ಥಾನವನ್ನು ಪಡೆದುಕೊಂಡಿದೆ. ಹಾಗೆಯೇ ರಾಜ್ಯಕ್ಕೆ 4ನೇ ಅತ್ಯುನ್ನತ ವಿಜ್ಞಾನ ಕಾಲೇಜು ಎಂಬ ಹಿರಿಮೆಗೆ ಪಾತ್ರವಾಗಿದೆ.
ಭಾರತದಲ್ಲಿ ಉನ್ನತ ಕಾಲೇಜುಗಳಿಗೆ ಸಂಬಂಧಿಸಿದಂತೆ ನಡೆಯುವ ಸಮೀಕ್ಷೆ 'ವೀಕ್- ಹನ್ಸ್ ಸರ್ವೆ ಫಾರ್ ಬೆಸ್ಟ್ ಕಾಲೇಜಸ್ ಇನ್ ಇಂಡಿಯಾ'ದಲ್ಲಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸಂತ ಅಲೋಶಿಯಸ್ ಕಾಲೇಜು ಉನ್ನತ ಶ್ರೇಣಿಯನ್ನು ಕಾಯ್ದುಕೊಂಡು ಬಂದಿದೆ. ಇದೀಗ ಈ ಬಾರಿಯೂ 22ನೇ ಸ್ಥಾನವನ್ನು ಪಡೆಯುವ ಮೂಲಕ ಕರಾವಳಿಗೆ ಕೀರ್ತಿ ತಂದಿದೆ.
ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳಾದ ಹನ್ಸಾ ದಿ ವೀಕ್ ಮತ್ತು ಇಂಡಿಯಾ ಟುಡೇ ಮ್ಯಾಗಜಿನ್ ಸಹಯೋಗದೊಂದಿಗೆ ಕಾರ್ಯಚರಿಸುತ್ತಿರುವ ಎಂಡಿಆರ್ ಎ ಮತ್ತು ಎಂ ಎಚ್ಆರ್ ಡಿಯ ಎನ್'ಐಆರ್'ಎಫ್ ನಡೆಸುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಕುರಿತ ಬಹು ಮುಖ್ಯವಾದ ವಾರ್ಷಿಕ ಸರ್ವೆಗಳಲ್ಲಿ ಸುಮಾರು 35000ಕ್ಕೂ ಹೆಚ್ಚಿನ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಹೆಸರು ಸೇರಿರುವುದು ಹೆಮ್ಮೆಯ ವಿಚಾರವಾಗಿದೆ.