ಮಂಗಳೂರು, ಜೂ14(Daijiworld News/SS): ನಗರದಲ್ಲಿ ಮಳೆಯಿಂದ ಸೃಷ್ಟಿಯಾಗಿರುವ ಕೃತಕ ನೆರೆಗೆ ಕಾರಣಗಳನ್ನು ಕಂಡುಕೊಂಡು ಪರಿಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಈಗಾಗಲೇ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ತುರ್ತು ಪರಿಸ್ಥಿತಿಯನ್ನು ಅವಲೋಕಿಸಿ, ಸೂಕ್ತ ಕ್ರಮ ಕೈಗೊಳ್ಳಲು ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಮುಂಗಾರು ಮಳೆ ಬಿರುಸು ಪಡೆದಿದ್ದು, ನಗರದ ವಿವಿಧೆಡೆ ಮರಗಳು ಬಿದ್ದು ಹಾಗೂ ರಸ್ತೆ ಕಾಮಗಾರಿಗಳಿಂದಾಗಿ ನೀರು ಹರಿಯುವಲ್ಲಿ ತೊಂದರೆಯಾಗಿತ್ತು. ಕಳೆದ ವರ್ಷದ ಮಳೆಯ ಅನುಭವವನ್ನು ಗಮನದಲ್ಲಿ ಇಟ್ಟುಕೊಂಡು, ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಕಾರ್ಯಪ್ರವೃತ್ತ ರಾಗಬೇಕು. ಈ ಕುರಿತು ವರದಿ ನೀಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.
ನಗರದ ಕೆಲ ಪ್ರಮುಖ ಪ್ರದೇಶಗಳಾದ ಕೊಡಿಯಾಲ್ಬೈಲ್, ಡೊಂಗರಕೇರಿ ಸೋನಾರ್ ಅಪಾರ್ಟ್ಮೆಂಟ್ ಬಳಿ ನೀರು ನಿಲ್ಲಲು ಕಾರಣವಾದ ಸ್ಲ್ಯಾಬ್ ತೆಗೆಯಲು ಸೂಚಿಸಲಾಗಿದೆ. ಪಾಣೆಮಂಗಳೂರಿನ ಆಲಡ್ಕದಲ್ಲಿ ಪ್ರವಾಹ ಬಂದಿಲ್ಲ. ಕೊಟ್ಟಾರ ಚೌಕಿಯಲ್ಲಿ ನೀರು ನಿಲ್ಲುತ್ತಿಲ್ಲ. ಕಣ್ಣೂರಿನಲ್ಲಿ ಸಂಭವಿಸಿದ ಕೃತಕ ನೆರೆಯನ್ನು ಪರಿಹರಿಸಲಾಗಿದೆ. ಡೊಂಗರಕೇರಿ ಕಸಬಾ ಬಜಾರ್ ಸಮಸ್ಯೆ ಪರಿಹರಿಸಲಾಗಿದೆ ಎಂದು ಹೇಳಿದ್ದಾರೆ.
ಮಾತ್ರವಲ್ಲ, ಪ್ರಾಕೃತಿಕ ವಿಕೋಪ ತುರ್ತು ಪರಿಸ್ಥಿತಿಯನ್ನು ಅವಲೋಕಿಸಿ, ಸೂಕ್ತ ಕ್ರಮ ಕೈಗೊಳ್ಳಲು ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರಾಕೃತಿಕ ವಿಕೋಪ ತುರ್ತು ಪರಿಸ್ಥಿತಿಯಲ್ಲಿ ಆಯಾ ಪ್ರದೇಶಗಳಿಗೆ ಸಂಬಂಧಿಸಿದ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ಸಂಪರ್ಕಿಸಬಹುದಾದ ನೋಡೆಲ್ ಅಧಿಕಾರಿಗಳ ವಿವರ:
ಪಾಲಿಕೆ ಉಪ ಆಯುಕ್ತೆ ಗಾಯತ್ರಿ ನಾಯ್ಕ (ಮೊ.ಸಂ. 9448259312), ಕಲ್ಲಾಪು, ಪೆರ್ಮನ್ನೂರು, ಜಪ್ಪಿನ ಮೊಗರು ಪ್ರದೇಶಗಳಿಗೆ ಕಾರ್ಯನಿರ್ವಾಹಕ ಎಂಜಿನಿಯರ್ ಗುರುರಾಜ್ ಮರಳಿಹಳ್ಳಿ (9448837205), ಕುದ್ರೋಳಿ, ಅಳಕೆ, ಬಂದರು, ಕಾರ್ಸ್ಟ್ರೀಟ್ ಪ್ರದೇಶಗಳಿಗೆ ಕಾರ್ಯನಿರ್ವಾಹಕ ಎಂಜಿನಿಯರ್ ಲಿಂಗೇಗೌಡ (9449555511), ಕೊಡಿಯಾಲ್ಬೈಲ್, ಲಾಲ್ಬಾಗ್, ಬಿಜೈ ಪ್ರದೇಶಗಳಿಗೆ ಕಾರ್ಯನಿರ್ವಾಹಕ ಎಂಜಿನಿಯರ್ ಗಣೇಶ್ (9449935900) ಅವರನ್ನು ನಿಯೋಜಿಸಲಾಗಿದೆ.
ಕಂಕನಾಡಿ, ವೆಲೆನ್ಸಿಯಾ, ಪಂಪ್ವೆಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿಶಂಕರ್ (9341353399), ಆನೆಗುಂಡಿ, ಅಳಕೆ, ಬಿಜೈ ಪ್ರದೇಶಗಳಿಗೆ ಪರಿಸರ ಎಂಜಿನಿಯರ್ ಮಧು (9886403029), ಪಾಂಡೇಶ್ವರ, ಮಂಗಳಾದೇವಿ, ಹೊಯಿಗೆಬಜರ್, ಅತ್ತಾವರ ಪ್ರದೇಶಗಳಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಶಾಲನಾಥ್ (8660114664), ಅಂಗರಗುಂಡಿ, ಬೈಕಂಪಾಡಿ ಪ್ರದೇಶಗಳಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ದೇವರಾಜ್ (7411832998) ಅವರನ್ನು ನಿಯೋಜಿಸಲಾಗಿದೆ.
ಕುಲಶೇಖರ, ಬಿಕರ್ನಕಟ್ಟೆ, ವಾಮಂಜೂರು ಪ್ರದೇಶಗಳಿಗೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಬ್ದುಲ್ ರೆಹಮಾನ್ (7760177377), ಕೊಟ್ಟಾರ ಚೌಕಿ ಪ್ರದೇಶಕ್ಕೆ ಕೈಗಾರಿಕೆ ಮತ್ತು ಬಾಯ್ಲರ್ ಇಲಾಖೆ ಸಹಾಯಕ ನಿರ್ದೇಶಕ ಪ್ರತಾಪ್ (8105733519), ಆದ್ಯಪಾಡಿ, ಮಳವೂರು, ಬಜ್ಪೆ ಪ್ರದೇಶಗಳಿಗೆ ಮಂಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎ. ರಘು (9480862110), ತೊಕ್ಕೊಟ್ಟು, ಉಳ್ಳಾಲ, ಸೋಮೇಶ್ವರ ಪ್ರದೇಶಗಳಿಗೆ ಉಳ್ಳಾಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀನಿವಾಸ ಮೂರ್ತಿ (9480061446) ಅವರನ್ನು ನಿಯೋಜಿಸಲಾಗಿದೆ.