ಮಂಗಳೂರು,ಫೆ.20(DaijiworldNews/TA): ಕುಡಿತದ ಮತ್ತಿನಲ್ಲಿ ಲಾರಿ ಚಾಲಕನೊಬ್ಬ ಯದ್ವಾ ತದ್ವಾ ಲಾರಿ ಚಲಾಯಿಸಿ, ಹಲವು ವಾಹನಗಳಿಗೆ ಡಿಕ್ಕಿ ಹೊಡೆಸಿದ ಘಟನೆ ಮಂಗಳೂರಿನ ಪಂಪ್ ವೆಲ್ ನಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಲಾರಿ ಚಾಲಕ ವಿಪರೀತ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದು, ಹಲವು ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಾನೆ. ಸಾರ್ವಜನಿಕರ ಎಚ್ಚರಿಕೆಗೂ ಕ್ಯಾರೇ ಎನ್ನದೆ ಲಾರಿ ಚಲಾಯಿಸಿದ್ದಾನೆ ಎನ್ನಲಾಗಿದೆ.