ಕಾರ್ಕಳ, ಫೆ.16 (DaijiworldNews/AA): ಕಫದ ತೊಂದರೆ ಉಲ್ಬಣಗೊಂಡು ಮೂರು ತಿಂಗಳ ಮಗುವೊಂದು ಮೃತಪಟ್ಟ ಘಟನೆ ಫೆ.14ರಂದು ಕಾರ್ಕಳದಲ್ಲಿ ನಡೆದಿದೆ.

ನಿಂಜೂರು ಗ್ರಾಮದ ಪೂರ್ಣಿಮಾ ಎಂಬವರ 3 ತಿಂಗಳ ಗಂಡು ಮಗು ಧನ್ವಿತ್ ಮೃತಪಟ್ಟಿದೆ. ಕಫದ ತೊಂದರೆ ಉಲ್ಬಣಗೊಂಡು ತೀವ್ರ ಅಸ್ವಸ್ಥಗೊಂಡಿದ್ದ ಮಗುವನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.