ಉಡುಪಿ, ಫೆ.15 (DaijiworldNews/AA): ಉಡುಪಿ ಕಥೋಲಿಕ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಲಿ. ನ ಅಧ್ಯಕ್ಷರಾಗಿ ಕಲ್ಮಾಡಿಯ ಲೂವಿಸ್ ಲೋಬೋ ಹಾಗೂ ಉಪಾಧ್ಯಕ್ಷರಾಗಿ ಕಾಪುವಿನ ಜೇಮ್ಸ್ ಡಿ'ಸೋಜಾ ಆಯ್ಕೆಯಾಗಿದ್ದಾರೆ.

ಉಡುಪಿ ಕ್ರಿಸ್ಟ್ ಜ್ಯೋತಿ ಕಾಂಪ್ಲೆಕ್ಸ್ನಲ್ಲಿರುವ ಸೊಸೈಟಿಯ ಆಡಳಿತ ಕಚೇರಿಯಲ್ಲಿ ಫೆಬ್ರವರಿ 13ರಂದು ಸೊಸೈಟಿಯ ಮುಂದಿನ ಐದು ವರ್ಷಗಳ ಅವಧಿಗೆ ಚುನಾವಣೆ ನಡೆಯಿತು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಕಚೇರಿಯ ಜಯಂತಿ ಎಫ್ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಂದೀಪ್ ಎ ಫೆರ್ನಾಂಡಿಸ್ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಜೊತೆಗೆ, ನೂತನವಾಗಿ ಮಂಡಳಿಯ ಸದಸ್ಯರನ್ನು ಕೂಡ ಆಯ್ಕೆ ಮಾಡಲಾಗಿದೆ. ಇಗ್ನೇಶಿಯಸ್ ಮೋನಿಸ್, ಮೂಡುಬೆಳ್ಳೆ; ಪರ್ಸಿ ಜೆ. ಡಿ'ಸೋಜಾ, ಕಲ್ಯಾಣಪುರ; ಅರ್ಚಿಬಾಲ್ಡ್ ಎಸ್. ಡಿಸೋಜಾ, ತೊಟ್ಟಂ; ಡಾ| ನೇರಿ ಕರ್ನೇಲಿಯೋ, ಕಕ್ಕುಂಜೆ-ಅಂಬಾಗಿಲು; ಲೋಯ್ಸೆಟ್ ಜೆ. ಕರ್ನೇಲಿಯೋ, ಕಡೇಕಾರು; ರಿಚರ್ಡ್ ಡಾಯಸ್, ಸಂತೆಕಟ್ಟೆ; ರಾಬರ್ಟ್ ಎಂ ಡಿ'ಸೋಜಾ, ಉಡುಪಿ; ಡಾಲ್ಫೀ ವಿ. ಲೂವಿಸ್, ಉಡುಪಿ; ವಿಲಿಯಂ ಬಿ. ಮಚಾದೋ, ಶಿರ್ವ; ಓನಿಲ್ ಜೆ. ಡಿ'ಸೋಜಾ, ಕೊಡವೂರು; ಜೆನಿವಿವ್ ಎಂ. ಮಿನೇಜಸ್, ಕಲ್ಮಾಡಿ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಹೊಸ ಆಡಳಿತ ಮಂಡಳಿಯ ಚುನಾವಣೆ ಫೆಬ್ರವರಿ 2 ರಂದು ನಡೆಯಿತು ಮತ್ತು ಎಲ್ಲಾ 13 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು.
ಉಳಿತಾಯ, ಅಭಿವೃದ್ಧಿ ಮತ್ತು ಹಂಚಿಕೆಯ ದೃಷ್ಟಿಯಲ್ಲಿ ಸುಮಾರು 28 ವರ್ಷಗಳ ಹಿಂದೆ ಸ್ಥಾಪನೆಯಾದ ಸಹಕಾರಿ ಸಂಘವು ಉಡುಪಿಯ ಕೆಎಂ ರಸ್ತೆಯಲ್ಲಿರುವ ತನ್ನ ಆಡಳಿತ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಉಡುಪಿ, ಮಲ್ಪೆ, ಉದ್ಯಾವರ, ಶಿರ್ವ ಮತ್ತು ಹೂಡೆ-ಕೆಮ್ಮಣ್ಣುಗಳಲ್ಲಿ ಶಾಖೆಗಳನ್ನು ಹೊಂದಿದ್ದು, ತನ್ನ ಅಭಿವೃದ್ಧಿಯ ಹಾದಿಯನ್ನು ಮುಂದುವರಿಸಿದೆ.