ಸುರತ್ಕಲ್, ಜೂ 13 (Daijiworld News/MSP): ಕೃಷ್ಣಾಪುರ 4 ನೇ ಬ್ಲಾಕಿನ ಮಸೀದಿ ಬಳಿಯ ಬಾಡಿಗೆ ಮನೆಯಲ್ಲಿ ಸೋಮವಾರ ರೆಫ್ರಿಜರೇಟರ್ ಸಿಲಿಂಡರ್ ಸ್ಪೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದ ಫರ್ಝಾನ (28) ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಸ್ಪೋಟದ ತೀವ್ರತೆಗೆ ಅವರ ಮೈಯೆಲ್ಲಾ ಸುಟ್ಟ ಗಾಯಗಳಾಗಿತ್ತು.
ಘಟನೆಯಲ್ಲಿ ಮೃತ ಮಹಿಳೆಯ ಪತಿ ಸಿದ್ದೀಕ್ ಹಾಗೂ 1 ವರ್ಷದ ಮಗು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಸಿದ್ದೀಕ್ ಅವರು ಕುಟುಂಬ ಸಹಿತ ಬಾಡಿಗೆ ಮನೆಯಲ್ಲಿ ವಾಸವಿದ್ದು, ಫರ್ಝಾನ ಸೋಮವಾರ ಬೆಳಗ್ಗೆ ಅಡುಗೆ ಮನೆಯಲ್ಲಿ ಗ್ಯಾಸ್ ಹೊತ್ತಿಸಲು ಬಂದಾಗ ಅವಘಡ ಸಂಭವಿಸಿತ್ತು. ಸ್ಫೋಟದ ತೀವ್ರತೆಗೆ ಮನೆಯ ಸಾಮಾನು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮೇಲ್ಭಾವಣಿಯ ಹಂಚುಗಳು ಭಾಗಶಃ ಹಾರಿ ಹೋಗಿತ್ತು.
ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.