ಮಂಗಳೂರು, ಫೆ.13(DaijiworldNews/TA): ನಗರದ ಕುದ್ರೋಳಿಯಲ್ಲಿರುವ ಕಸಾಯಿಖಾನೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯುತ್ತಿರಲಿಲ್ಲ. ಆದರೆ ಅದರ ಪಕ್ಕದಲ್ಲಿರುವ ಖಾಸಗಿ ಸ್ಥಳದಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿತ್ತು , ಅವುಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಮನಪಾ ಮೇಯರ್ ಮನೋಜ್ ಕುಮಾರ್ ತಿಳಿಸಿದ್ದಾರೆ.

ಕೆಲದಿನಗಳ ಹಿಂದೆ ಮೇಯರ್ ಸಹಿತ ಕಾರ್ಪೋರೇಟರ್ ಗಳು ನಗರದ ಕುದ್ರೋಳಿಗೆ ಭೇಟಿ ನೀಡಿ, ಅಕ್ರಮ ಕಸಾಯಿಖಾನೆಗೆ ಭೇಟಿ ನೀಡಿದ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡಿದರು. ಖಾಸಗಿ ಸ್ಥಳದಲ್ಲಿ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಮರುದಿನವೇ ಅಧಿಕಾರಿಗಳು ಅಲ್ಲಿನ ಖಾಸಗಿ ಜಮೀನಿನಲ್ಲಿರುವ ಕಟ್ಟಡದ ಕೋಣೆಯನ್ನೇ ಪೊಲೀಸ್ ಮೂಲಕ ಸೀಲ್ ಮಾಡುವ ಕಾರ್ಯ ನಡೆದಿದೆ. ಅಲ್ಲದೆ ಬಾಕಿ ಉಳಿದ ಶೆಡ್ಗಳಿಗೂ ಮನಪಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಮೇಯರ್ ತಿಳಿಸಿದರು.