ಮಂಗಳೂರು, ಜೂ13(Daijiworld News/SS): ಮುಂಗಾರು ಪ್ರವೇಶವಾದ ಹಿನ್ನಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದ್ದು, ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದೆ.
ನೂತನ ವೇಳಾಪಟ್ಟಿಯು ಅಕ್ಟೋಬರ್ 31ರ ವರೆಗೆ ಜಾರಿಯಲ್ಲಿರುತ್ತದೆ ಎಂದು ಮೂಲಗಳು ತಿಳಿಸಿದೆ. ಬದಲಾದ ವೇಳಾಪಟ್ಟಿಯಂತೆ ಮತ್ಸ್ಯಗಂಧ ಎಕ್ಸ್ಪ್ರೆಸ್ (ರೈಲು ನ. 12620) ಮಂಗಳೂರು ಸೆಂಟ್ರಲ್ನಿಂದ ಮಧ್ಯಾಹ್ನ 12.50ಕ್ಕೆ ಹೊರಟು ಲೋಕಮಾನ್ಯ ತಿಲಕ್ ಟರ್ಮಿಲನ್ನು ಮರುದಿನ ಬೆಳಗ್ಗೆ 6.35ಕ್ಕೆ ತಲುಪಲಿದೆ ಎನ್ನಲಾಗಿದೆ.
ಮಂಗಳೂರು ಜಂಕ್ಷನ್ನಿಂದ ಸೂಪರ್ ಫಾಸ್ಟ್ ಎಕ್ಸ್ಪ್ರೆಸ್ (ರೈಲು ನ. 12134) ಸಂಜೆ 4.45ಕ್ಕೆ ಹೊರಟು ಮರುದಿನ ಬೆಳಗ್ಗೆ 10.33ಕ್ಕೆ ಸಿಎಸ್ಟಿಎನ್ ತಲುಪಲಿದೆ ಎಂದು ತಿಳಿದುಬಂದಿದೆ.
ಎರ್ನಾಕುಳಂ ಜಂಕ್ಷನ್ ನಿಜಾಮುದ್ದೀನ್ ಮಂಗಳಾ ಎಕ್ಸ್ಪ್ರೆಸ್ (ರೈಲು ನ. 12617) ಮಂಗಳೂರು ಜಂಕ್ಷನ್ನಿಂದ ರಾತ್ರಿ 7.15ಕ್ಕೆ ಹೊರಟು ಮರುದಿನ ಮಧ್ಯಾಹ್ನ 1.15ಕ್ಕೆ ತಲುಪಲಿದೆ. ತಿರುವನಂತಪುರಂ ಎಲ್ಟಿಟಿ ಎಕ್ಸ್ಪ್ರಸ್ (ರೈಲು ನ. 16346)ಮಂಗಳೂರು ಜಂಕ್ಷನ್ನಿಂದ ರಾತ್ರಿ 11.20ಕ್ಕೆ ಹೊರಡಲಿದೆ ಎನ್ನಲಾಗಿದೆ.
ಮಂಗಳೂರು ಮಡಗಾಂವ್ ಪ್ಯಾಸೆಂಜರ್ ರೈಲು (ನಂ. 56640) ಬೆಳಗ್ಗೆ 5.40ಕ್ಕೆ ಹೊರಟು ಮಡಗಾಂವ್ಗೆ ಮಧ್ಯಾಹ್ನ 1.30ಕ್ಕೆ ತಲುಪಲಿದೆ. ಮಂಗಳೂರು ಮಡಗಾಂವ್ ಇಂಟರ್ ಸಿಟಿ ಎಕ್ಸ್ಪ್ರೆಸ್ (ರೈಲು ನಂ. 22636) ಮಂಗಳೂರು ಸೆಂಟ್ರಲ್ನಿಂದ ಬೆಳಗ್ಗೆ 8.15ಕ್ಕೆ ಹೊರಟು ಮಧ್ಯಾಹ್ನ 3.35ಕ್ಕೆ ಮಡಗಾಂವ್ ತಲುಪಲಿದೆ.
ಮಡಗಾಂವ್ನಿಂದ ಸಂಜೆ 4ಕ್ಕೆ ಹೊರಡುವ ರೈಲು ರಾತ್ರಿ 11ಕ್ಕೆ ಮಂಗಳೂರು ಸೇರಲಿದೆ. ಮಡಗಾಂವ್ ಮಂಗಳೂರು ಪ್ಯಾಸೆಂಜರ್ (ರೈಲು ನ. 56641) ಮಡಗಾಂವ್ನಿಂದ ಮಧ್ಯಾಹ್ನ 2ಗಂಟೆಗೆ ಹೊರಟು ರಾತ್ರಿ 8ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ ಎಂದು ಮೂಲಗಳು ತಿಳಿಸಿವೆ.