ಉಪ್ಪಿನಂಗಡಿ, ಜೂ 12 (Daijiworld News/SM): ವಿದ್ಯುತ್ ಶಾಕ್ ತಗುಲಿದ ಪರಿಣಾಮ ಪವರ್ ಮ್ಯಾನ್ ದಾರುಣವಾಗಿ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ 34 ನೆಕ್ಕಿಲಾಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿ ಮೆಸ್ಕಾಂ ಶಾಖೆಯಲ್ಲಿ ಪವರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಾವಣಗೆರೆ ಮೂಲದವರಾದ ಮಿಟ್ಯಾ ನಾಯಕ್(35) ಮೃತ ವ್ಯಕ್ತಿ. ವಿದ್ಯುತ್ ದುರಸ್ಥಿ ಮಾಡಿದ ಬಳಿಕ ವಿದ್ಯುತ್ ಪೂರೈಕೆ ಮಾಡುವ ವೇಳೆ ಘಟನೆ ನಡೆದಿದೆ. ವಿದ್ಯುತ್ ಪರಿವರ್ತಕಕ್ಕೆ ಚಾಲನೆ ಕೊಡುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿದೆ.
ಜೂನ್12ರಂದು ಮೈನ್ ಲೈನ್ ದುರಸ್ಥಿ ಮಾಡಲಾಗಿತ್ತು. ಪೊಲೀಸ್ ವಸತಿ ಗೃಹದ ಬಳಿ ಲೈನ್ ಆಫ್ ಮಾಡಲಾಗಿತ್ತು. ದುರಸ್ಥಿಯ ಬಳಿಕ ಲೈನ್ ಚಾರ್ಜ್ ಮಾಡಲು ತೆರಳಿದ್ದರು.ಈ ವೇಳೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.