ಕಾರ್ಕಳ, ಫೆ.07 (DaijiworldNews/AA): ಕಾರ್ಕಳ ನಗರದ ಅಭಿವೃದ್ಧಿಗಾಗಿ ಭಾರೀ ಬೆಲೆ ತೆತ್ತು ಅಳವಡಿಸಲಾಗಿರುವ ಸ್ವಾಗತ ಕಮಾನ್ನ ನಿರ್ವಹಣೆ ಇಲ್ಲದೇ ಹೋದರಿಂದ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.



ಕಳೆದ ಬಾರಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ರಾಜ್ಯ ಸರಕಾರ ಬಿಡುಗಡೆಗೊಳಿಸಿ ವಿಶೇಷ ಅನುದಾನದಲ್ಲಿ ಕಾರ್ಕಳ ಆಸುಪಾಸಿನಲ್ಲಿ 3 ಕಡೆಗಳಲ್ಲಿ ಬೃಹತ್ ಸ್ವಾಗತ ಕಮಾನ್ ಅಳವಡಿಸಲಾಗಿತ್ತು. ಅವುಗಳ ಪೈಕಿ ಜೋಡುರಸ್ತೆ, ಪುಲ್ಕೇರಿ, ಕರಿಯಕಲ್ಲು ಒಳಗೊಂಡಿದೆ.
ಜೋಡುರಸ್ತೆ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಈ ಹಿಂದೆ ಇದ್ದ ಸ್ವಾಗತ ಕಮಾನ್ ತೆರವುಗೊಳಿಸಿ ಸನ್ನಿಹದ ಹಾಡಿಯೊಂದರಲ್ಲಿ ಶೇಖರಣೆ ಮಾಡಲಾಗಿತ್ತು. ಸರ್ವಋತುಗಳಲ್ಲೂ ಆಹೋರಾತ್ರಿ ಆ ಹಾಡಿಯಲ್ಲಿ ಬಿದ್ದುಕೊಂಡಿದ್ದ ಸ್ವಾಗತ ಕರ್ಮಾನ್ ತುಕ್ಕು ಹಿಡಿದಿದೆ.
ಈ ವಿಚಾರವು ಕಾರ್ಕಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಹಲವು ಭಾರೀ ಪ್ರಸ್ತಾಪವಾಗಿದ್ದು, ಈ ಹಿಂದೆ ಇದ್ದ ಸ್ವಾಗತ ಕಮಾನ್ನನ್ನು ವಿಸ್ತರಿಸುವಂತೆ ಸದಸ್ಯರು ಒತ್ತಾಯಿಸಿದ್ದು, ಅದಕ್ಕಾಗಿ ಅನುದಾನದ ಕೊರತೆ ಇರುವುದುನ್ನು ಅಂದಿನ ಸಭೆಯಲ್ಲಿ ಮುಖ್ಯಾಧಿಕಾರಿ ತಿಳಿಯಪಡಿಸಿದ್ದರು. ಆದರೆ ಇದುವರೆಗೆ ಪರಿಹಾರ ಕಾಣದೇ ಸ್ವಾಗತ ಕಮಾನ್ ಪಾಳುಬಿದ್ದುಕೊಂಡಿದೆ.
ಉಳಿದ ಎರಡು ಸ್ವಾಗತ ಕಮಾನುಗಳು ಸಂಪೂರ್ಣ ತುಕ್ಕು ಹಿಡಿದು ಯಥಾಸ್ಥಿತಿಯಲ್ಲಿ ಇದೆ. ಸ್ವಾಗತ ಕಮಾನ್ ನಲ್ಲಿ ದೂರದ ಊರುಗಳಿಗೆ ತೆರಳುವ ಹಾಗೂ ಕಿ.ಮೀ ದೂರದ ವಿವರಗಳ ಮಾಸಿ ಹೋಗಿದೆ. ಇದರಿಂದ ಪ್ರವಾಸಿಗರಿಗೆ ಯಾವುದೇ ರೀತಿಯಲ್ಲಿ ಪ್ರಯೋಜನವಾಗುದಿಲ್ಲ.
ಪ್ರಜ್ಞಾವಂತ ನಾಗರಿಕರಿಂದ ತಾತ್ಕಾಲಿಕ ಪರಿಹಾರ !
ಸ್ವಾಗತ ಕಮಾನು ಕುರಿತು ಹಲವು ಬಾರಿ ಪುರಸಭಾ ಆಡಳಿತಕ್ಕೆ ಗಮನಕ್ಕೆ ಕೌನ್ಸಿಲರ್ ಹಾಗೂ ಪ್ರಜ್ಞಾವಂತ ನಾಗರಿಕರು ತಂದಿದ್ದರೂ ಯಾವುದೇ ಸ್ಪಂದನೆ ಸಿಗದೇ ಹೋದಾಗ ಪ್ರಜ್ಞಾವಂತ ನಾಗರಿಕರು ಎನ್ನಿಸಿರುವ ಕೆಲವರು ತಾವೇ ಖರ್ಚು ಭರಿಸಿ ಬ್ಯಾನರ್ ಸಿದ್ಧಪಡಿಸಿ ಸ್ವಾಗತ ಕಮಾನ್ಗೆ ಅಳವಡಿಸಿದ್ದಾರೆ. ಅದರಲ್ಲಿ ಅಗತ್ಯ ಮಾಹಿತಿಯನ್ನು ಅಳವಡಿಸಲಾಗಿದೆ. ಇದು ತಾತ್ಕಾಲಿಕ ಪರಿಹಾರವಾಗಿದೆ. ಮುಂಬರುವ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅಥವಾ ಅದಕ್ಕೂ ಮನ್ನವೇ ಶಾಶ್ವತ ಪರಿಹಾರ ಸಿಗಬಹುದೇ ಎಂಬುವುದೇ ಯಕ್ಷ ಪ್ರಶ್ನೆಯಾಗಿ ಉಳಿದಿದೆ.