ಉಡುಪಿ,ಫೆ.06(DaijiworldNews/TA): ಮಾಂಕಾಳ್ ವೈದ್ಯರನ್ನು ಗೃಹ ಸಚಿವರಾಗಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಾವು ಒತ್ತಾಯಿಸುತ್ತೇನೆ ಎಂಬುದಾಗಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ತಿಳಿಸಿದ್ದಾರೆ.

ಕಾರ್ಕಳದಲ್ಲಿ ನಡೆದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಗೋ ಹತ್ಯೆಯ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದ ಸಂದರ್ಭ ಕಾಂಗ್ರೆಸ್ ಪಕ್ಷದ ಧರಣಿಯ ನಡುವೆಯೂ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದೆವು, ಆದರೆ ಈಗ ಸಿದ್ದರಾಮಯ್ಯ ಸರ್ಕಾರ ಗೋಹತ್ಯೆಗೆ ಬೆಂಬಲ ಕೊಡ್ತಾ ಇದೆ.
ಮಾಂಕಾಳ್ ವೈದ್ಯರು ಗೋ ಹತ್ಯೆ ವಿಚಾರವಾಗಿ ಉತ್ತಮ ಹೇಳಿಕೆ ನೀಡಿದ್ದು, ಗೋಹತ್ಯೆ ಮಾಡಿದರೆ ಸರ್ಕಲ್ ನಲ್ಲಿ ಗುಂಡಿಕ್ಕುವುದಾಗಿ ಹೇಳಿದ್ದಾರೆ. ರಾಜಕಾರಣವನ್ನು ಮರೆತು ಮಾಂಕಾಳ್ ವೈದ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಅವರನ್ನು ಗೃಹ ಸಚಿವರಾಗಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ನಾವು ಒತ್ತಾಯಿಸುತ್ತೇನೆ ಎಂಬುದಾಗಿ ತಿಳಿಸಿದ್ದಾರೆ.