ಬ್ರಹ್ಮಾವರ, ,ಫೆ.06(DaijiworldNews/ AK) : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ನಾಲ್ವರಿಗೆ ಗಂಭೀರ ಗಾಯಗಳಾಗಿವೆ.


ಬ್ರಹ್ಮಾವರ ತಾಲೂಕಿನ ಕಡೂರಿನಲ್ಲಿ ಕೊಕ್ಕರ್ಣೆಯಲ್ಲಿ ಘಟನೆ ನಡೆದಿದೆ.ಮೃತರನ್ನು ಬೀಜಾಡಿಯ ಜಯಲಕ್ಷ್ಮಿ (68) ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ರಾಮಚಂದ್ರ ಭಟ್, ಸುಜಾತ, ಮಂಗಳಾ, ಪ್ರೇಮಾ ಅವರನ್ನು ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಂಡವು ಕಬ್ಬಿನಾಲೆ ಜಾತ್ರೆಗೆ ತೆರಳಿ ಮಂದಾರ್ತಿ, ಸಾಲಿಗ್ರಾಮ, ಅಮೃತೇಶ್ವರಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.