ಕಾರ್ಕಳ, ಫೆ.05 (DaijiworldNews/AA): ರಾಜ್ಯ ಸರಕಾರದ ಭ್ರಷ್ಟ ಆಡಳಿತ ಹಾಗೂ ಜನವಿರೋಧಿ ನೀತಿಗಳನ್ನು ಖಂಡಿಸಿ ಕಾರ್ಕಳ ಬಿಜೆಪಿ ವತಿಯಿಂದ ಫೆ.6ರಂದು ಕಾರ್ಕಳ ತಾಲೂಕು ಕಚೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜೀಸಲಾಗಿದೆ.

ಫೆ.6ರ ಬೆಳಿಗ್ಗೆ 10.00 ಗಂಟಗೆ ಶಾಸಕ ವಿ.ಸುನೀಲ್ ಕುಮಾರ್ ಪ್ರತಿಭಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದಿನಬಳಕೆ ಸೇರಿದಂತೆ ಎಲ್ಲಾ ವಿಭಾಗದಲ್ಲೂ ಬೆಲೆ ಏರಿಕೆ ನಡೆಯುತ್ತಾ ಬಂದಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಆಟಳಿತ ಬಂದ ದಿನದಿಂದ ರಸ್ತೆ, ನೀರು, ಶಾಲಾ ಕಟ್ಟಡ ಹಾಗ ಇತರ ಅಭಿವೃದ್ಧಿಗಾಗಿ ಯಾವುದೇ ಅನಿದಾನವನ್ನು ಬಿಡುಗಡೆಗೊಳಿಸುತ್ತಿಲ್ಲ. ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ರಾಜ್ಯದಲ್ಲಿ ಮತಾಂಧರ ಅಟ್ಟಹಾಸ ಹಾಗೂ ಅವರ ಓಲೈಕೆ ಹಿಂದೂ ಹಬ್ಬಗಳಲ್ಲಿ ಮತಾಂಧರರಿಂದ ಗಲಭೆ ಸೃಷ್ಠಿ, ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಅನುದಾನ ನೀಡದೇ ವಕ್ಫ್ ಮಂಡಳಿಗೆ ಅನುದಾನದ ಕೊಡುಗೆ ನೀಡಲಾಗುತ್ತಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿಗುವ ಕೆಂಪುಕಲ್ಲು ಹಾಗೂ ಮರಳು ಪೊರೈಕೆಗೆ ಸರಿಯಾದ ನೀತಿಗಳನ್ನು ಮಾಡದೇ ಎಲ್ಲದಕ್ಕೂ ತಡೆಯೊಡ್ಡಿ ಕೃತಕ ಅಭಾವ ಸೃಷ್ಠಿಸಿದೆ. ಬಡವರ ಕುಡುಂಬಗಳು ವಿದ್ಯಾಭ್ಯಾಸ ಹಾಗೂ ಆರೋಗ್ಯ ಭದ್ರತೆ ದೃಷ್ಠಿಯಲ್ಲಿ ಅನುಕೂಲವಾಗುತ್ತಿದ್ದ ಅನೇಕ ಬಿಪಿಎಲ್ ಕಾರ್ಡ್ ಗಳನ್ನು ವಿವಿಧ ನೆಪಗಳನ್ನು ನೀಡಿ ಕಾಂಗ್ರೆಸ್ ರದ್ದು ಮಾಡುತ್ತಿದೆ.
ರಾಜ್ಯ ಸರಕಾರ ಹಾಲಿನ ದರ ಏರಿಕೆ ಮಾಡಿದರೂ ರೈತರಿಗೆ ನೀಡಬೇಕಾದ 900 ಕೋಟಿಗೂ ಅಧಿಕ ಸಬ್ಸಿಡಿಯನ್ನು ಬಾಕಿ ಉಳಿಸಿಕಕೊಂಡಿದೆ. ಇದರಿಂದಾಗಿ ಹೈನುಗಾರಿಕೆಯು ರೈತರ ಕೈಗಳನ್ನು ಸುಡುತ್ತಿದೆ. ವಿವಿಧ ನೆಪಗಳಲ್ಲಿ ನೀಡಿಶೇ. 90 ರಷ್ಟು ಅಕ್ರಮ ಸಕ್ರಮ ಅರ್ಜಿಗಳನ್ನು ಅನರ್ಹ ಎಂದು ಗುರುತಿಸಿ ಬಗರ್ ಹುಕುಂ ಸಮಿತಿಯ ಮುಂದೆ ಮಂಡಿಸದೇ, ಅಧಿಕಾರಿಗಳ ಹಂತದಲ್ಲಿಯೇ ತರಾತುರಿಯಲ್ಲಿ ತಿರಸ್ಕರಿಸಲಾಗುತ್ತಿದೆ.
ಕರಾವಳಿ ಭಾಗದಲ್ಲಿ ಒಂದು ಎಕ್ರೆ ವರೆಗಿನ ಏಕ ನಿವೇಶನ ವಿನ್ಯಾಸಗಳಿಗೆ ಅನುಮೋದನೆ ಪ್ರಕ್ರಿಯೆಯನ್ನು ಕಠಿಣಗೊಳಿಸಿ,ಮನೆ ಕಟ್ಟಲು ಕಾದು ಕುಳಿತ ಜನರು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ ಎಂದು ಕಾರ್ಕಳ ಬಿಜೆಪಿ ಆರೋಪಿಸಿದೆ. ಒಟ್ಟಿನಲ್ಲಿ ಕರ್ನಾಟಕವನ್ನು ದಿವಾಳಿ ಮಾಡುತ್ತಾ, ಬಡವರ ರಕ್ತ ಹೀರುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಧ್ವನಿ ಎತ್ತೋಣ ಎಂದು ಕಾರ್ಕಳ ಬಿಜೆಪಿ ಕರೆ ನೀಡಿದೆ.