ಚಿಕ್ಕಮಗಳೂರು ಡಿ 3: ಇಲ್ಲಿನ ಕೋಮು ಸೂಕ್ಷ್ಮ ಪ್ರದೇಶವಾದ ದತ್ತಾತ್ರೇಯ ಪೀಠ ಬಾಬಾ ಬುಡಾನ್ಗಿರಿಯಲ್ಲಿ ಡಿ ೩ ರ ಭಾನುವಾರ ದತ್ತ ಪಾದುಕೆಯ ದರ್ಶನದ ವೇಳೆ ಬಾವುಟ ನೆಡುವ ವಿಚಾರಕ್ಕೆ ವಾಗ್ವಾದ ಉಂಟಾಗಿದೆ ಈ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿರುವ ಬಗ್ಗೆ ವರದಿಯಾಗಿದೆ. ದತ್ತಮಾಲಾಧಾರಿಗಳು ಸರತಿಯಲ್ಲಿ ಗುಹೆಯ ಒಳಗೆ ತೆರಳಿ ಹಿಂತಿರುಗುತ್ತಿರುವ ವೇಳೆಯಲ್ಲಿ ಈ ಘಟನೆ ನಡೆದಿದೆ. ಒಂದಿಷ್ಟು ಜನ ಮಾಲಾಧಾರಿಗಳು ನಿಷೇಧಿತ ಪ್ರದೇಶದಲ್ಲಿ ದ್ವಜ ನೆಡಲು ಪ್ರಯತ್ನಿಸಿದ್ದಾರೆ ಈ ವೇಳೆ ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ದಕ್ಷಿಣ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಮತ್ತು ಎಸ್ಪಿ ಅಣ್ಣಾಮಲೈ ಸ್ಥಳದಲ್ಲಿ ಠಿಕಾಣಿ ಹೂಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.