ಬಂಟ್ವಾಳ, ಫೆ.02 (DaijiworldNews/AA): ತರಕಾರಿ ಅಂಗಡಿಗೆ ಕಳ್ಳರು ನುಗ್ಗಿ ನಗದು ದೋಚಿದ ಘಟನೆ ಮೆಲ್ಕಾರ್ ನಲ್ಲಿ ಜ.31ರಂದು ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮಹಮ್ಮದ್ ಶರೀಫ್ ಎಂಬವರ ಮಾಲೀಕತ್ವದ ಚಂದ್ರಿಕಾ ತರಕಾರಿ ಅಂಗಡಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಶರೀಫ್ ಅವರು ಸಮಾಜ ಸೇವಾ ಕಾರ್ಯಕರ್ತರಾಗಿದ್ದು, ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸಹಕರಿಸಲು ತಮ್ಮ ಅಂಗಡಿಯಲ್ಲಿ ಕಾಣಿಕೆ ಡಬ್ಬಿ ಇಟ್ಟಿದ್ದರು. ಬಾಕ್ಸ್ ನಲ್ಲಿ ಸಂಗ್ರಹಿಸಿದ್ದ ಹಣವನ್ನು ಕಳ್ಳರು ಕದ್ದೊಯ್ದಿದ್ದಾರೆ.
ಕಾಣಿಕೆ ಡಬ್ಬಿಯಲ್ಲಿ ಸುಮಾರು 5,000 ರೂ.ಗೂ ಅಧಿಕ ಹಣವಿತ್ತು. ಕಳ್ಳತನ ಕೃತ್ಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಇನ್ನು ಘಟನೆ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.