ಬಂಟ್ವಾಳ, ಫೆ.01 (DaijiworldNews/AK): ಅಚಲ ಕಾಯಕನಿಷ್ಠರಾಗಿದ್ದ ಮಡಿವಾಳ ಮಾಚಿದೇವ ಅವರು ವಚನ ಸಾಹಿತ್ಯ ಮತ್ತು ಧರ್ಮದ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ವಚನಗಳ ಸಂದೇಶದಂತೆ ಇಂದು ಮನಗಳಲ್ಲಿರುವ ಕೊಳೆಯನ್ನು ತೊಳೆಯುವ ಅನಿವಾರ್ಯತೆ ಇದೆ ಎಂದು ತಹಸೀಲ್ದಾರ್ ಡಿ ಅರ್ಚನಾ ಭಟ್ ಹೇಳಿದರು.

ಅವರು ಶನಿವಾರ ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ಮಟ್ಟದ ಮಡಿವಾಳ ಮಾಚಿದೇವ ಜಯಂತಿ ಆಚರಣೆಯಲ್ಲಿ ದೀಪ ಬೆಳಗಿಸಿ ಪುಷ್ಪಾರ್ಚನೆ ನಡೆಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸ್ಥಾನೀಯ ಉಪತಹಶೀಲ್ದಾರರಾದ ನರೇಂದ್ರನಾಥ ಮಿತ್ತೂರು, ತಾಲೂಕು ಕಛೇರಿ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಯವರು, ಗ್ರಾಮ ಸಹಾಯಕರು ಹಾಜರಿದ್ದರು.