ಉಡುಪಿ, ಜೂ 10(Daijiworld News/SM): ಸುಬ್ರಹ್ಮಣ್ಯ ಮಠ ಹಾಗೂ ದೇವಸ್ಥಾನದ ಶಾಂತಿ ಸಂಧಾನ ಪ್ರಯತ್ನ ಪ್ರಗತಿಯಲ್ಲಿದೆ. ಎರಡೂ ಕಡೆಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುತ್ತಿದೆ. ಆ ಮೂಲಕ ಇಬ್ಬರಿಗೂ ಸಮ್ಮತಿಯಾಗುವ ಸಂಧಾನ ಸೂತ್ರ ಸಿದ್ಧಪಡಿಸುವುದಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಇನ್ನೊಂದು ಸುತ್ತಿನ ಮಾತುಕತೆಯ ಮೂಲಕ ಈ ಸಂಧಾನ ಪೂರ್ಣಗೊಳ್ಳಲಿದೆ. ಆದರೆ, ದೇವಸ್ಥಾನ ಕಮಿಟಿಯ ಅಧ್ಯಕ್ಷರ ವೈಯುಕ್ತಿಕ ಕಾರಣಗಳಿಂದಾಗಿಗೆ ಮಾತುಕತೆ ಮುಂದೂಡಲಾಗಿದೆ. ಜೂನ್ ೧೦ ರಂದು ನಡೆಯಬೇಕಿದ್ದ ಮಾತುಕತೆಯನ್ನು ಮುಂದೂಡಲಾಗಿದೆ ಎಂದರು.
ಇನ್ನು ಈಗಾಗಲೇ ನನಗೆ ಕೆಲವಾರು ಪೂರ್ವ ನಿಯೋಜಿತ ಕಾರ್ಯಗಳಿವೆ. ಆ ಹಿನ್ನೆಲೆಯಲ್ಲಿ ಮಾತುಕತೆಗೆ ಒಂದಿಷ್ಟು ಅಡ್ಡಿಯಾಗಲಿವೆ. ಜೂನ್ ೨೩ರ ತನಕ ಕಾರ್ಯಕ್ರಮಗಳಿದ್ದು, ಅದರ ಬಳಿಕ ಮಾತುಕತೆ ನಡೆಸಲಾಗುವುದಾಗಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.