ಮಂಗಳೂರು ಡಿ 3: ನಗರದ ಕೊಡಿಯಾಲ್ ಬೈಲಿನ ಟಿಎಂಪೈ ಸೆಂಟರ್ನಲ್ಲಿ ಡಿ. ೨ ರಂದು ರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ, ಮಗಳು ಆರಾಧ್ಯ, ತಾಯಿ ಬೃಂದಾ ರೈ ಭಾಗವಹಿಸಿದ್ದರು.
ತಾಯಿ ಬೃಂದಾ ರೈ ಅವರ ಸೋದರ ಸೋಂತಾಡಿ ಉದಯ ಕುಮಾರ್ ಶೆಟ್ಟಿ, ಅವರ ಪುತ್ರ ಉಜ್ವಲ್ ಅವರ ಮದುವೆ ಕಾರ್ಯಕ್ರಮಕ್ಕೆ ಬಾಲಿವುಡ್ ಬೆಡಗಿ ಐಶ್ವರ್ಯ ರೈ ಆಗಮಿಸಿದ್ದರು. ಮದುವೆಯ ಸಂಭ್ರಮವನ್ನು ಸವಿಯುತ್ತಾ ಎಲ್ಲರೊಂದಿಗೆ ನಗು ನಗುತ್ತಲೇ ಮಾತನಾಡಿದ ಕುಡ್ಲದ ಕುವರಿ ಕೆಂಪು ಬಣ್ಣದ ಲಾಂಗ್ ಕುರ್ತಾ ಹಾಗೂ ಮಗಳಿಗೂ ಅದೇ ಬಣ್ಣದ ಉಡುಪು ತೊಡಿಸಿದ್ದರು. ಮದುವೆಯ ಸಂಭ್ರಮದಲ್ಲಿಯೂ ಹಿರಿಯರ ಕಾಲಿಗೆರೆಗಿ ಆಶೀರ್ವಾದ ಪಡೆಯಲು ಮರೆಲಿಲ್ಲ ಈ ಬೆಡಗಿ. ಮಾತೃ ಬಾಷೆ ತುಳುವಿನಲ್ಲಿಯೇ ಮಾತನಾಡುತ್ತಾ ಕುಟುಂಬ ಸದಸ್ಯರೊಡನೆ ಮಿಳಿತವಾದ ನಟಿ ಮದುವೆ ಮನೆಯಲ್ಲಿ ಕೋರಿ ಸುಕ್ಕ, ‘ಅಂಜಲ್ ಫ್ರೈ'ಸೇವಿಸಿದರು.