ಉಡುಪಿ, ಜೂ 10 (Daijiworld News/MSP): ಇಲ್ಲಿನ ಶಿರ್ವದ ಕಳತ್ತೂರು ಗ್ರಾಮದ ಮನೆಯೊಂದಕ್ಕೆ ನುಗ್ಗಿ, ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕಳ್ಳತನ ನಡೆಸಿದ ಘಟನೆ ವರದಿಯಾಗಿದೆ. ಕಳತ್ತೂರು ಗ್ರಾಮ ಪಡು ಕಲ್ಲಂದ್ ನಿವಾಸಿ ಯೋಗೀಶ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಜೂ.೩ ರ ಸಂಜೆ 4:30 ಗಂಟೆಯಿಂದ ಜೂ.9 ರ ಬೆಳಿಗ್ಗೆ 11:30 ಗಂಟೆಯ ನಡುವಿನ ಅವಧಿಯಲ್ಲಿ ಕನ್ನ ಹಾಕಿರಬುಹು ಎಂದು ಅಂದಾಜಿಸಲಾಗಿದೆ.
ಮನೆಯ ಅಡುಗೆಕೋಣೆಯ ಮಹಡಿಯ ಹಂಚು ತೆಗೆದ ಕಳ್ಳರು ಮನೆಯೊಳಗೆ ಪ್ರವೇಶಿಸಿ ಕಪಾಟಿನ ಲಾಕರ್ ಮುರಿದು ಅದರಲ್ಲಿದ್ದ 16 ಗ್ರಾಂ ತೂಕದ ಚಿನ್ನದ ನೆಕ್ಲಸ್ ಸರ, 56 ಗ್ರಾಂ ತೂಕದ 8 ಚಿನ್ನದ ಬಳೆಗಳು, 10 ಗ್ರಾಂ ತೂಕದ 2 ಜೊತೆ ಕಿವಿಯ ಚಿನ್ನದ ಓಲೆ, 4 ಗ್ರಾಂ ತೂಕದ 2 ಉಂಗುರ, ಸೇರಿದಂತೆ ಒಟ್ಟು 2 ಲಕ್ಷ 75ಸಾವಿರ ಮೌಲ್ಯದ ಚಿನ್ನಾಭರಣ ಮತ್ತು 15 ಸಾವಿರ ಮೌಲ್ಯದ ಬೆಳ್ಳಿಯ ಸಾಮಾಗ್ರಿಗಳು ಹಾಗೂ ನೋಕಿಯೋ ಕಂಪೆನಿಯ ಮೊಬೈಲ್ ಸೆಟ್ ಕಳ್ಳತನ ನಡೆಸಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಶಿರ್ವ ಫೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.