ಬೆಳ್ತಂಗಡಿ, ಜೂ 09 (Daijiworld News/SM): 32 ವರ್ಷಗಳ ಹಳೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಜೂನ್ ೮ರಂದು ಪುತ್ತೂರು ತಾಲೂಕಿನಲ್ಲಿ ಬಂಧಿಸಿದ್ದಾರೆ.
ಬಂಟ್ವಾಳ ಸಜಿಪನಡು ಕಾಂತುಕೋಡಿ ನಿವಾಸಿ ರಜಾಕ್(60) ಎಂಬಾತ ಬಂಧಿತ ಆರೋಪಿ. ಗುರುವಾಯನಕೆರೆಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ೧೯೮೭ರಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಈತ ತಲೆಮರೆಸಿಕೊಂಡಿದ್ದ. ಇದೀಗ ಈ ಸಂಬಂಧ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಸುಭಾಶ್ ನಗರ ನಿವಾಸದಿಂದ ಬಂಧಿಸಲಾಗಿದೆ.
ಆರೋಪಿ ಕಳೆದ 32 ವರ್ಷಗಳಿಂದ ಕಾಲ ತಲೆಮರೆಸಿಕೊಂಡಿದ್ದ. ಇನ್ನು ಬಂಟ್ವಾಳ ಠಾಣೆಯಲ್ಲೂ ಈತನ ವಿರುದ್ಧ ಪ್ರಕರಣವೊಂದು ದಾಖಲಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಬೆಳ್ತಂಗಡಿ ಠಾಣಾ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.